ರಾಯಚೂರು: ‘ಜಲ ಸಂರಕ್ಷಣೆ, ನೀರಾವರಿ ಹಾಗೂ ಕಟ್ಟಡ ವಿನ್ಯಾಸಕ್ಕೆ ಆದಿಲ್ಶಾಹಿ ಅರಸು ನೀಡಿದ ಕೊಡುಗೆಯನ್ನು ಮರೆಯಲಾಗದು’ ಎಂದು ಹಿರಿಯ ಸಾಹಿತಿ ಎ.ಎಲ್.ನಾಗೂರು ಹೇಳಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಲೇಖಕ ಬಶೀರ್ ಅಹ್ಮದ್ ಹೊಸಮನಿ ರಚಿತ ‘ಆದಿಲ್ ಶಾಹಿ’ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಅವರು ಮಾತನಾಡಿದರು.

‘ಆದಿಲ್ಶಾಹಿಗಳು ಆಡಳಿತ ನಡೆಸಿದ ಪ್ರದೇಶಗಳಲ್ಲಿ ಇಂದಿಗೂ ಅವರ ಅಭಿವೃದ್ಧಿಯ ಕುರುಹುಗಳು ಕಾಣಸಿಗುತ್ತವೆ. ಕೆಲವಷ್ಟು ಇತಿಹಾಸ ಪೆಟ್ಟಿಗೆಗಳಲ್ಲೇ ಹುದುಗಿ ಹೋಗಿದೆ. ಅದನ್ನು ಆಳವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಆದಿಲ್ ಶಾಹಿ ಅರಸರ ಆಡಳಿತದಲ್ಲಿ ಪರ್ಷಿಯನ್ , ದಖನಿ ,ಅರೆಬಿಕ್ ಭಾಷೆಗಳು ಬೆಳವಣಿಗೆ ಹೊಂದಿದವು‘ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಚಿತ್ರಕಲಾವಿದ ಎಚ್.ಎಚ್.ಮ್ಯಾದಾರ ಮಾತನಾಡಿ, ‘ಸೃಷ್ಟಿ ನಿರ್ಮಾಣವಾದ ಮೇಲೆ ಸಂವೇದನೆಯೇ ಸಂವಹನವಾಯಿತು. ಕಲೆ ಬದುಕಿನ ಭಾಷೆ ಆಯಿತು. ನಂತರ ಮಾತು, ಅಕ್ಷರ ತದನಂತರ ಸಾಹಿತ್ಯ ಹುಟ್ಟಿಕೊಂಡಿತು. ಇಂದು ಕಲೆ ವಿಶ್ವ ಭಾಷೆಯಾಗಿದೆ‘ ಎಂದು ವಿವರಿಸಿದರು.

ಹಿರಿಯ ಸಾಹಿತಿ ವೀರಹನುಮಾನ ಮಾತನಾಡಿ, ‘ಬಶೀರ್ ಅಹ್ಮದ್ ಹೊಸ ಮನಿ ಅವರು ರಚಿತ ಅದಿಲ್ ಶಾಹಿ ನಾಟಕ ಪ್ರತಿಯೊಬ್ಬರಿಗೂ ಅರ್ಥ ಆಗುವ ರೀತಿಯಲ್ಲಿ ಅತಿ ಸರಳ ಕನ್ನಡದಲ್ಲಿ ರಚಿಸಲಾಗಿದೆ. ಕನ್ನಡ ಮೇಷ್ಟ್ರು ಸೈಯದ್ ಗೌಸ್ ಮೈನುದ್ದೀನ್ ಪೀರಜಾದೆ ಹಾಗೂ ಯುವಕವಿ ಈರಣ್ಣ ಬೆಂಗಾಲಿ ಅವರಿಗೆ ಈ ಕೃತಿ ಅಭಿಮಾನದಿಂದ ಅರ್ಪಣೆ ಮಾಡಿದ್ದಾರೆ‘ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರವೀಂದ್ರ ಎಸ್.ಬಂಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕನ್ನಡ ಮಿತ್ರಕೂಟದ ಅಧ್ಯಕ್ಷ ಅಶೋಕಕುಮಾರ ಜೈನ್, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ರಫೀಕ್ ಅಹ್ಮದ್, ಆರ್ಟ ಆಫ್ ಲಿವಿಂಗ್ ಸಂಸ್ಥೆಯ ಯೋಗ ಗುರು ಮಲ್ಲಿಕಾರ್ಜುನ ಸ್ವಾಮಿ, ನಿವೃತ್ತ ಮಾನವ ಸಂಪನ್ಮೂಲ ಅಧಿಕಾರಿ ಜಾನ್ವೆಸ್ಲಿ, ಪ್ರವೀಣರೆಡ್ಡಿ ಗುಂಜಹಳ್ಳಿ ಪಾಲ್ಗೊಡಿದ್ದರು. ಬಶೀರ್ ಅಹ್ಮದ್ ಹೊಸಮನಿ , ಪರ್ವೀನ್ ಬೇಗಂ ಹೊಸಮನಿ , ರಫೀಕ್ ಅಹ್ಮದ್, ಹೊಸಮನಿ ಪ್ರಕಾಶನದ ಕೋಶಾಧ್ಯಕ್ಷೆ ಖುಷಿಬಾ ಹೊಸಮನಿ, ರಾಮಣ್ಣ ಮ್ಯಾದಾರ್, ಈರಣ್ಣ ಬೆಂಗಾಲಿ ಉಪಸ್ಥಿತರಿದ್ದರು.

ಹೊಸಮನಿ ಪ್ರಕಾಶನದ ಕೋಶಾಧ್ಯಕ್ಷೆ ಖುಷಿ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿ ಚಂದ್ರಮೌಳೇಶ್ವರ ಪ್ರಾರ್ಥನೆ ಮಾಡಿದರು. ಉಪನ್ಯಾಸಕಿ ಮಲ್ಲಮ್ಮ ಮೇಟಿ ಸ್ವಾಗತಿಸಿದರು. ಗೋವರ್ಧನ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಹೊಸಮನಿ ಪ್ರಕಾಶನ ಉಪಾಧ್ಯಕ್ಷೆ ಪರ್ವೀನ್ ಬೇಗಂ ಹೊಸಮನಿ
ವಂದಿಸಿದರು.

ಇದು ಸ್ಪರ್ಧಾತ್ಮಕ ಯುಗ. ಪದವಿ ಓದಿ ಪ್ರಮಾಣಪತ್ರ ಪಡೆದ ಮಾತ್ರಕ್ಕೆ ನೌಕರಿ ಸಿಗಲಾರದು. ವಿದ್ಯಾರ್ಥಿ ಹಂತದಲ್ಲಿ ಕೌಶಲ ಬೆಳೆಸಿಕೊಳ್ಳಬೇಕು
ಎಚ್.ಎಚ್.ಮ್ಯಾದಾರ, ಹಿರಿಯ ಚಿತ್ರಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.