ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೊಗರಿ ಬೆಳೆಯಲು ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಿ: ನಯೀಂ ಹುಸೇನ್

Published 3 ಆಗಸ್ಟ್ 2024, 14:23 IST
Last Updated 3 ಆಗಸ್ಟ್ 2024, 14:23 IST
ಅಕ್ಷರ ಗಾತ್ರ

ತುರ್ವಿಹಾಳ: ‘ರೈತರು ತೊಗರಿ ಬಿತ್ತನೆ ಹಾಗೂ ಬೆಳೆಸುವಲ್ಲಿ ಸಂಪ್ರದಾಯಿಕ ಪದ್ಧತಿ ಜತೆಗೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡಾಗ ಹೆಚ್ಚಿನ ಇಳುವರಿ ಪಡೆಯಬಹುದು’ಎಂದು ಲಿಂಗಸುಗೂರಿನ ಕೃಷಿ ಇಲಾಖೆಯ ಉಪ ನಿರ್ದೇಶಕ ನಯೀಂ ಹುಸೇನ್ ಹೇಳಿದರು.

ಪಟ್ಟಣದ ರೈತ ರಾಜಶೇಖರ ಗಡೇದ ಅವರ ಹೊಲದಲ್ಲಿ ಲಿಂಗಸೂರು ಹಾಗೂ ಸಿಂಧನೂರು ಕೃಷಿ ಇಲಾಖೆಯ ಆತ್ಮಯೋಜನೆಯಡಿ ತೊಗರಿ ಬೆಳೆ ಉತ್ಪಾದನೆ ಹೆಚ್ಚಿಸುವ ಜಾಗೃತಿ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶದ ರೈತರು ತೊಗರಿ ಬೆಳೆಯನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದು, ಕಳೆದ ಮೂರು ವರ್ಷಗಳಿಂದ ತೊಗರಿ ಬೆಳೆಯ ಉತ್ಪಾದನೆ ಹಾಗೂ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇದರಿಂದ ರೈತರ ಆದಾಯವು ಕುಂಠಿತಗೊಂಡಿದೆ ಎಂದು ತಿಳಿಸಿದರು.

ರೈತರು ತೊಗರಿ ಬೆಳೆಯನ್ನು ಬೆಳೆಯುವಾಗ ಪ್ರಮುಖವಾಗಿ ಬೀಜೋಪಚಾರ, ಗಿಡಗಳ ಕುಡಿ ಚಿವುಟುವುದು ಹಾಗೂ ಸಾವಯವ ಗೊಬ್ಬರವನ್ನು ಬಳಸುವ ಪದ್ಧತಿಯನ್ನು ಅಳವಡಿಸಿಕೊಂಡಾಗ ಉತ್ಪಾದನೆ ಹಾಗೂ ಆದಾಯ ಹೆಚ್ಚಾಗುತ್ತದೆ ಎಂದರು.

ಸಿಂಧನೂರಿನ ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್ ಮಾತನಾಡಿ, ತೊಗಿರಿ ಬಿತ್ತನೆ ಮಾಡಿದ 45 ದಿನಗಳ ನಂತರ ಗಿಡಗಳಿಗೆ ಕುಡಿ ಚಿವುಟುವುದರಿಂದ ಅನೇಕ ಪಂಗಲಗಳಾಗಿ ಬೆಳೆಯುತ್ತವೆ ಇದರಿಂದ ಇಳುವರಿ ಹೆಚ್ಚಾಗುತ್ತದೆ ಎಂದರು.

ನಂತರ ತೊಗರಿ ಗಿಡಗಳಿಗೆ ಕುಡಿ ಚಿವುಟುವುದನ್ನು ತಾಂತ್ರಿಕ ವಿಧಾನದಿಂದ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.

ಈ ವೇಳೆ ತುರ್ವಿಹಾಳ ಕೃಷಿ ಅಧಿಕಾರಿ ಧರ್ಮಣ್ಣ, ಆತ್ಮ ಯೋಜನೆ ಅಧಿಕಾರಿ ರಾಜಶೇಖರ ಕುಷ್ಟಗಿ, ತಾಂತ್ರಿಕ ಅಧಿಕಾರಿ ಗುರುಸಿದ್ದಯ್ಯ, ರೈತರಾದ ನಿಂಗಪ್ಪ ಸಜ್ಜನ, ಪಂಪಾಪತಿ ದೇಸಾಯಿ, ಮಾಳಪ್ಪ ಸಜ್ಜನ, ಶಿವುಮಣಿ, ಪ್ರಭಾಕಾರ ಕಂಚಗಾರ, ತಿರುಪತೆಪ್ಪ ನಾಯಕ ಮತ್ತು ಕಲಮಂಗಿ, ಹತ್ತಿಗುಡ್ಡ ಗ್ರಾಮಗಳ ರೈತರು ಭಾಗವಹಿಸಿದ್ದರು.

ಚಿತ್ರಶೀರ್ಚಿಕೆ: ತುರ್ವಿಹಾಳ ಪಟ್ಟಣದ ರೈತರ ಹೊಲದಲ್ಲಿ ಬೆಳೆದ ತೊಗರಿ ಗಿಡಗಳಿಗೆ ಕುಡಿ ಚಿವುಟುವ ಪ್ರಾಯೋಗಿಕ ವಿಧಾನವನ್ನು ಲಿಂಗಸೂರಿನ ಕೃಷಿ ಇಲಾಖೆ ಕೃಷಿ ನಿರ್ಧೇಶಕ ನಯೀಂ ಹುಸೇನ್ ಸಾಬ್ ಅವರು ತಿಳಿಸಿಕೊಟ್ಟರು.
ಚಿತ್ರಶೀರ್ಚಿಕೆ: ತುರ್ವಿಹಾಳ ಪಟ್ಟಣದ ರೈತರ ಹೊಲದಲ್ಲಿ ಬೆಳೆದ ತೊಗರಿ ಗಿಡಗಳಿಗೆ ಕುಡಿ ಚಿವುಟುವ ಪ್ರಾಯೋಗಿಕ ವಿಧಾನವನ್ನು ಲಿಂಗಸೂರಿನ ಕೃಷಿ ಇಲಾಖೆ ಕೃಷಿ ನಿರ್ಧೇಶಕ ನಯೀಂ ಹುಸೇನ್ ಸಾಬ್ ಅವರು ತಿಳಿಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT