ಗುರುವಾರ , ಜೂಲೈ 2, 2020
28 °C

ವಿವಿಧ ಬೇಡಿಕೆ ಈಡೇರಿಕೆಗೆ ಎಐಎಂಎಸ್ಎಸ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೊವೀಡ್-19 ಮಹಾಮಾರಿಯಿಂದ ತೊಂದರೆಗೆ ಒಳಪಟ್ಟು ವಲಸೆ ಕಾರ್ಮಿಕರು, ಬಡವರು ಎದುರಿಸುತ್ತಿರುವ ಕಷ್ಟಗಳನ್ನು ಪರಿಹರಿಸಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಕಾರ್ಮಿಕರು ಕೆಲಸದಿಂದ ಹೊರದೂಡಲ್ಪಟ್ಟಿದ್ದಾರೆ. 60 ದಿನಗಳಿಂದ ಎಷ್ಟೋ ಕೂಲಿ ಕಾರ್ಮಿಕರು ಊಟವಿಲ್ಲದೆ, ಇರಲು ವಸತಿ ವ್ಯವಸ್ಥೆ ಇಲ್ಲದೆ ತಮ್ಮ ತಮ್ಮ ರಾಜ್ಯಗಳಿಗೆ ವಾಪಸ್‌ ಹೊರಟಿದ್ದಾರೆ.  ಲಕ್ಷಾಂತರ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಅಸಂಘಟಿತ ಕ್ಷೇತ್ರಗಳಾದ ಗಾರ್ಮೆಂಟ್ಸ್‌ಗಳಲ್ಲಿ, ಸಣ್ಣ ಉದ್ಯಮಗಳಲ್ಲಿ, ಅಂಗಡಿ - ಮಾಲ್‌ಗಳಲ್ಲಿ ದುಡಿಯುತ್ತಿದ್ದವರು, ಮನೆ ಕೆಲಸದವರು,  ಸಣ್ಣ  ವ್ಯಾಪಾರಿಗಳು ಕೆಲಸ ಕಳೆದುಕೊಂಡು ಸಂಕಷ್ಠದಲ್ಲಿದ್ದಾರೆ.  ಲಾಕ್ ಡೌನ್‌ನಿಂದ ಮುಚ್ಚಲ್ಪಟ್ಟಿದ ಮದ್ಯದಂಗಡಿಗಳು ಈಗ ತೆರವುಗೊಂಡಿದ್ದು ಇದರಿಂದ ಹೆಣ್ಣುಮಕ್ಕಳ ಮೇಲೆ ಜೀವನ ಹಿಂದಿನಂತೆಯೇ ಸಂಕಷ್ಟಮಯವಾಗಿದೆ. ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿರುವುದು ಕಂಡುಬಂದಿದೆ.

ಆದ್ದರಿಂದಲೇ ಮಹಿಳೆಯರ ಬಹು ವರ್ಷಗಳ ಬೇಡಿಕೆಯಾದ ಮದ್ಯಪಾನ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಕೌಟುಂಬಿಕ ದೌರ್ಜನ್ಯಗಳನ್ನು ತಡೆಗಟ್ಟಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಿ , ಮದ್ಯಮಾರಾಟವನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಸಂಚಾಲಕಿ ಉಮಾ ಮಹೇಶ್ವರಿ, ಸಂಗೀತ, ಗಾಯತ್ರಿ, ಮೀನಾಕ್ಷಿ  ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು