ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಸಾಮಾಜಿಕ ಪ್ರಗತಿ ಸಾಧ್ಯ: ಪಿ.ಅನಿಲ್‍ಕುಮಾರ

Last Updated 19 ಏಪ್ರಿಲ್ 2021, 4:22 IST
ಅಕ್ಷರ ಗಾತ್ರ

ಮಾನ್ವಿ: ‘ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ಎಲ್ಲಾ ಜಾತಿ ಜನಾಂಗಗಳ ಸಾಮಾಜಿಕ ಪ್ರಗತಿ ಸಾಧ್ಯ’ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಪಿ.ಅನಿಲ್‍ಕುಮಾರ ಹೇಳಿದರು.

ಪಟ್ಟಣದ ಅಮೃತ ಕಾಲೊನಿಯಲ್ಲಿ ದಲಿತ ಸಮರ ಸೇನೆ ಹಾಗೂ ಕರ್ನಾಟಕ ಸ್ಲಂ ಜನರ ಕ್ರಿಯಾ ವೇದಿಕೆ ಜಂಟಿಯಾಗಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, ‘ ಅಂಬೇಡ್ಕರ್ ಅವರ ಹೋರಾಟ ಹಾಗೂ ಪರಿಶ್ರಮದಿಂದ ದೇಶದ ಎಲ್ಲಾ ಶೋಷಿತ ಸಮುದಾಯಗಳು ಏಳಿಗೆ ಹೊಂದಲು ಸಾಧ್ಯವಾಗಿದೆ’ ಎಂದರು.

ಮುಖಂಡರಾದ ಯಲ್ಲಪ್ಪ ಬಾದರದಿನ್ನಿ, ಜೆ.ರವಿಕುಮಾರ್ ವಕೀಲ, ಪತ್ರಕರ್ತ ಆನಂದಸ್ವಾಮಿ ನಕ್ಕುಂದಿ ಹಾಗೂ ರಾಜ್ಯ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ವಾಜೀದ್ ಸಾಜಿದ್ ಮಾತನಾಡಿದರು.

ಜಿಲ್ಲಾ ದಲಿತ ಸಮರ ಸೇನೆಯ ಅಧ್ಯಕ್ಷ್ಷ ಅನಿಲ್ ನೀಲಕಂಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಮದ್ಲಾಪೂರ. ಬಸವರಾಜ ನಿಲೋಗಲ್, ಅಲ್ಲಮಪ್ರಭು ಕವಿತಾಳ, ಕರಿಯಪ್ಪ, ಪ್ರಕಾಶ್, ಶ್ರೀನಿವಾಸ್ ರೆಡ್ಡಿ ಮೌನೇಶ್, ಶರಣಪ್ಪ, ಮೋದಿನ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT