ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | ಅಂಗನವಾಡಿ: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Published 1 ಸೆಪ್ಟೆಂಬರ್ 2024, 15:12 IST
Last Updated 1 ಸೆಪ್ಟೆಂಬರ್ 2024, 15:12 IST
ಅಕ್ಷರ ಗಾತ್ರ

ರಾಯಚೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳಿಗೆ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ರಾಯಚೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

ಖಾಲಿ ಹುದ್ದೆಗಳ ವಿವರ: ಯರಗುಂಟಾ ಕೇಂದ್ರ ಸಂಖ್ಯೆ-2, ಸಾಮಾನ್ಯ, ಮಾಮಡದೊಡ್ಡಿ ಕೇಂದ್ರ ಸಂಖ್ಯೆ-2 ಸಾಮಾನ್ಯ, ಕಲವಲದೊಡ್ಡಿ ಕೇಂದ್ರ ಸಂಖ್ಯೆ-2 ಪ.ಪಂಗಡ, ಕೊರ್ವಿಹಾಳ ಕೇಂದ್ರ ಸಂಖ್ಯೆ-2 ಸಾಮಾನ್ಯ, ರಾಳದೊಡ್ಡಿ ಕೇಂದ್ರ ಸಂಖ್ಯೆ-2 ಸಾಮಾನ್ಯ, ದಿನ್ನಿ ಕೇಂದ್ರ ಸಂಖ್ಯೆ-1 ಪ.ಪಂಗಡ, ರಾಮನಗರ ಕೇಂದ್ರ ಸಂಖ್ಯೆ-2 ಪ.ಜಾತಿ, ಮಮದಾಪೂರು ಶಾಂಭವಿ ನಗರ ಸಾಮಾನ್ಯ, ಉಮರನಗರ ಕೇಂದ್ರ ಸಂಖ್ಯೆ-3 ಸಾಮಾನ್ಯ, ಅಂದ್ರೂನ್‍ಕಿಲ್ಲಾ ಕೇಂದ್ರ ಸಂಖ್ಯೆ- 3 ಸಾಮಾನ್ಯ, ನೀರಭಾವಿಕುಂಟಾ ಕೇಂದ್ರ ಸಂಖ್ಯೆ- 5 ಪ.ಜಾತಿ, ಮಂಗಳವಾರಪೇಟೆ ಕೇಂದ್ರ ಸಂಖ್ಯೆ-2 ಪ.ಜಾತಿ, ಎಲ್.ಬಿ.ಎಸ್.ನಗರ ಕೇಂದ್ರ ಸಂಖ್ಯೆ-12 ಸಾಮಾನ್ಯ, ಆಶೋಕ ಡಿಪೊ ಕೇಂದ್ರ ಸಂಖ್ಯೆ-4 ಸಾಮಾನ್ಯ, ಹೊಸ ಆಶ್ರಯ ಕಾಲೊನಿ ಕೇಂದ್ರ ಸಂಖ್ಯೆ-2 ಸಾಮಾನ್ಯ, ಮಂಜರ್ಲಾ ಕೇಂದ್ರ ಸಂಖ್ಯೆ-2 ಪ.ಜಾತಿ, ಮದರ್‌ಟ್ರಸ್ಟ್ ಸಾಮಾನ್ಯ, ಎಲ್.ಬಿ.ಎಸ್.ನಗರ ಕೇಂದ್ರ ಸಂಖ್ಯೆ-2 ಸಾಮಾನ್ಯ, ಹೊಸೂರು ಕೇಂದ್ರ ಸಂಖ್ಯೆ-2 ಸಾಮಾನ್ಯ, ಅರಬ್ ಮೊಹಲ್ಲಾ ಕೇಂದ್ರ ಸಂಖ್ಯೆ-2 ಸಾಮಾನ್ಯ, ಜನತಾ ಕಾಲೋನಿ ಕೇಂದ್ರ ಸಂಖ್ಯೆ-1 ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲು ನಿಗದಿಪಡಿಸಲಾಗಿದೆ.

ಆಸಕ್ತರು ಇಲಾಖೆಯ ವೆಬೆಸೈಟ್‌ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸೆ.29ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಯಚೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯವನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT