ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಗಮನ ಸೆಳೆದ ಅಪ್ಪು ಜನ್ಮದಿನ ಆಚರಣೆ

Published 17 ಮಾರ್ಚ್ 2024, 13:50 IST
Last Updated 17 ಮಾರ್ಚ್ 2024, 13:50 IST
ಅಕ್ಷರ ಗಾತ್ರ

ಲಿಂಗಸುಗೂರು: ಪವರ್ ಸ್ಟಾರ್ ಡಾ.ಪುನೀತ್‍ ರಾಜ್‌ಕುಮಾರ ಜನ್ಮದಿನವಾದ ಭಾನುವಾರ ಚಿಕ್ಕ ಮಕ್ಕಳು ಅಪ್ಪು ಪೋಸ್ಟರ್‌ ಹಿಡಿದು ಹಾಡಿಗೆ ಹೆಜ್ಜೆ ಹಾಕಿರುವ ಚಿತ್ರಣ ಪಟ್ಟಣದ ನಾಗರಿಕರ ಗಮನ ಸೆಳೆಯಿತು.

ಭಾನುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಬೈಸಿಕಲ್‍ ಹಿಂದುಗಡೆ ಸಣ್ಣ ಸೌಂಡ್‍ ಬಾಕ್ಸ್ ಮೇಲೆ ಪುನೀತ್‍ ಅವರ ಭಾವಚಿತ್ರ ಇರಿಸಿ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ಎರಡು ಕಟ್ಟಿಗೆಗಳಿಗೆ ಪೋಸ್ಟರ್ ಅಂಟಿಸಿ ಮೊಬೈಲ್‍ ಹಾಡಿನ ಸೌಂಡ್‍ಗೆ ಕುಣಿದು ಕುಪ್ಪಳಿಸಿದ ಮಕ್ಕಳು ಜಯಘೋಷ ಹಾಕಿದರು.

ಹಳೆ ಬಸ್‍ ನಿಲ್ದಾಣ, ಹೊಸ ಬಸ್‍ ನಿಲ್ದಾಣ, ಶಾರದಾ ವಿಜ್ಞಾನ ಕಾಲೇಜು ಸೇರಿದಂತೆ ಬಹುತೇಕ ಬೀದಿಗಳಲ್ಲಿ, ವೃತ್ತಗಳಲ್ಲಿ ಯುವಕರು ತಂಡೋಪ ತಂಡವಾಗಿ ಜಮಾವಣೆಗೊಂಡು ಅಪ್ಪು ಜನ್ಮ ದಿನ ಆಚರಿಸಿದ್ದು ಕಂಡುಬಂತು. ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಪುನೀತ್‍ ಜನ್ಮದಿನ ಆಚರಣೆ ಮಾಡಿರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT