ಶನಿವಾರ, ಜುಲೈ 24, 2021
27 °C

ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಇಲ್ಲಿನ ಪುನರ್ವಸತಿ ಕ್ಯಾಂಪ್ ನಂ.1, 4, 5, ರಾಗಲಪರ್ವಿ, ದಿದ್ದಿಗಿ, ರಾಮತ್ನಾಳ ಮತ್ತು ವಲ್ಕಮ್‍ದಿನ್ನಿ ಗ್ರಾಮಗಳಲ್ಲಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಬಸನಗೌಡ ಬಾದರ್ಲಿ ಫೌಂಡೇಶನ್‍ನಿಂದ ಭಾನುವಾರ ತಲಾ ₹ 5 ಸಾವಿರದಂತೆ 9 ಕುಟುಂಬಗಳಿಗೆ ಧನಸಹಾಯ ನೀಡಿ ಬಸನಗೌಡ ಬಾದರ್ಲಿ ಸಾಂತ್ವನ ಹೇಳಿದರು.

ನಂತರ ದಿದ್ದಿಗಿಯ ಸಂತ್ರಸ್ತರ ಜೊತೆ ಮಾತನಾಡಿ, ‘ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ‘ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡದ ರಾಜ್ಯ ಘಟಕದ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ, ಮುಖಂಡರಾದ ಹನುಮರೆಡ್ಡೆಪ್ಪಗೌಡ, ಮಲ್ಲನಗೌಡ ದಿದ್ದಿಗಿ, ನಾಗರಾಜ ರಾಮತ್ನಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು