ಬುಧವಾರ, ಜನವರಿ 29, 2020
29 °C

‘ಅಭಿಯಾನ ಯಶಸ್ವಿಗೆ ಸಹಕರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ‘ಡಿಫ್ತೀರಿಯಾ ನಿಯಂತ್ರಣಕ್ಕೆ 5 ರಿಂದ 16 ವಯೋಮಾನದ ಮಕ್ಕಳಿಗೆ ವಿಶೇಷ ಶಾಲಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅವಶ್ಯ’ ಎಂದು ಉಪ ವಿಭಾಗಾಧಿಕಾರಿ ಡಾ. ದಿಲೀಶ್‌ ಸಸಿ ಹೇಳಿದರು.

ಇಲ್ಲಿನ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ  (ಪ್ರೌಢಶಾಲೆ ವಿಭಾಗ) ಈಚೆಗೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಇಂದಿನಿಂದ ಡಿಸೆಂಬರ್‌ 31ರ ವರೆಗೆ ಲಸಿಕೆ ಹಾಕಲಾಗುವುದು. ಪ್ರತಿ ಮಗುವಿಗೆ ಲಸಿಕೆ ಹಾಕಿಸುವುದು ಕಡ್ಡಾಯ. ಹೀಗಾಗಿ ಪಾಲಕರು, ಸಂಘ ಸಂಸ್ಥೆಗಳು, ಪ್ರತಿನಿಧಿಗಳು
ಕೂಡ ಜಾಗೃತಿ ಮೂಡಿಸುವ ಜೊತೆಗೆ ಲಸಿಕೆ ಹಾಕಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ ಮಾತನಾಡಿ, ‘ಪ್ರಾಥಮಿಕ, ಪ್ರೌಢಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಲಾಗಿದೆ. ಗಂಟಲಮಾರಿ, ನಾಯಿಕೆಮ್ಮು ಮತ್ತು ಧನುರ್ವಾಯು ರೋಗವನ್ನು ತಡೆಯವ ಉದ್ದೇಶದಿಂದ ಲಸಿಕೆ
ಹಾಕಲಾಗುತ್ತಿದೆ’ ಎಂದು ಅವರು ಹೇಳಿದರು.

ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ, ಡಾ.ಸುವರ್ಣ, ಡಾ.ಆಯಿಶಾ ಬಿರಾದರ, ಉಪ ಪ್ರಾಚಾರ್ಯ ಹೊನ್ನಪ್ಪ, ಮೋನಮ್ಮ, ಮುಬಿನಾ, ನಾಗರತ್ನಾ, ಸಚಿನ್‌, ಪ್ರಕಾಶ, ರಾಜಾರಾಮಸಿಂಗ್‌ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು