ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಪುರುಷರ ಆದರ್ಶ ಪಾಲಿಸಿ

ಭಗೀರಥ ಗುರುಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಲಹೆ
Last Updated 26 ಮೇ 2022, 11:44 IST
ಅಕ್ಷರ ಗಾತ್ರ

ಕವಿತಾಳ: ‘ಸಕಲ ಜೀವರಾಶಿಗಳಿಗೆ ಜೀವ ಜಲ ನೀಡಿದ ಮಹಾತ್ಮ ಭಗೀರಥ ಮಹರ್ಷಿಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ಭಗೀರಥ ಗುರುಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಕಠಿಣ ಮತ್ತು ಅವಿರತ ಪ್ರಯತ್ನದ ಮೂಲಕ ಜೀವನದಲ್ಲಿ ಉತ್ತಮ ಗುರಿ ಹೊಂದಲು ಸಾಧ್ಯ ಎನ್ನುವುದಕ್ಕೆ ಭಗೀರಥ ಮಹರ್ಷಿಗಳು ನಿದರ್ಶನವಾಗಿದ್ದಾರೆ. ಉಪ್ಪಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ಸಮಾಜಕ್ಕೆ ಮೀಸಲಾತಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ಸಮಾಜ ಬಾಂಧವರು ಒಗ್ಗೂಡುವ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಬಲರಾಗಬೇಕು’ ಎಂದು ಉಪನ್ಯಾಸಕ ನಾರಾಯಣ ಬೆಳಗುರ್ಕಿ ಹೇಳಿದರು.

ಗೊಲಪಲ್ಲಿ ವಾಲ್ಮೀಕಿ ಪೀಠದ ವರದಾನಂದ ಸ್ವಾಮೀಜಿ, ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕರಾದ ಗಂಗಾಧರ ನಾಯಕ, ಹನುಮಂತಪ್ಪ ಆಲ್ಕೊಡ್ ಮತ್ತು ಮುಖಂಡ ರವಿ ಬೋಸರಾಜು ಮಾತನಾಡಿದರು.

ಗುರು ಬಸವರಾಜ ಸ್ವಾಮಿ, ಗಂಗಪ್ಪ ಪೂಜಾರಿ ಮಾನಸಗಲ್, ಶರಣಯ್ಯ ಗುಡದಿನ್ನಿ, ಕಿರಲಿಂಗಪ್ಪ, ದೇವಣ್ಣ ನವಲಕಲ್, ಸೈಯದ್ ಖಾದ್ರಿ, ಯಲ್ಲಪ್ಪ ಕಟ್ಟಿಮನಿ, ಅಮರೇಶ ಕಟ್ಟಿಮನಿ, ಅಯ್ಯಪ್ಪ ನಿಲೋಗಲ್, ಯಮನೂರಪ್ಪ ಗುಡಿ, ಅಮರೇಶ ಬಳಗಾನೂರು, ಮೌನೇಶ ಕಟ್ಟಿಮನಿ, ಹನುಮೇಶ, ಲಾಳೇಸಾಬ್ ಕರಿಗುಡಿ, ಛತ್ರಪ್ಪ, ವೆಂಕಟೇಶ ಗುಡ್ಯಾಳ್, ಯಮನಪ್ಪ ದಿನ್ನಿ, ಎನ್.ಸ್ವಾಮಿ ಹಟ್ಟಿ ಚಿನ್ನದಗಣಿ, ಶ್ರೀನಿವಾಸ ಹಮ್ಮಾಪುರ ಮತ್ತು ರಾಮಣ್ಣ ಕವಿತಾಳ ಮತ್ತಿತರರು ಇದ್ದರು.

ಭಗೀರಥ ವೃತ್ತದಿಂದ ತ್ರಯಂಭಕೇಶ್ವರ ದೇವಸ್ಥಾನದ ವರೆಗೆ ಸ್ವಾಮೀಜಿಯನ್ನು ಕಳಸ ಕುಂಭಗಳ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT