ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಹೆಸರಿನಲ್ಲಿ ಜನರ ಒಡೆಯುವ ಕೆಲಸ: ರವಿ ಪಾಟೀಲ

Published 27 ಜನವರಿ 2024, 15:45 IST
Last Updated 27 ಜನವರಿ 2024, 15:45 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ‘ದೇಶದಲ್ಲಿ ಜನರು ಜಾತಿ–ಧರ್ಮದ ಹೆಸರಿನಲ್ಲಿ ಹೊಡೆದಾಡುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಇದರ ನಿರ್ಮೂಲನೆ ಸಾಧ್ಯ’ ಎಂದು ಕಾಂಗ್ರೆಸ್ ಮುಖಂಡ ರವಿ ಪಾಟೀಲ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಆಪ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಪ್ರತಿಯೊಂದು ಮನೆಯನ್ನೂ ತಲುಪಿವೆ. ಇದು ಗ್ಯಾರಂಟಿಗಳನ್ನು ನೀಡಲಾಗುವುದಿಲ್ಲ ಎಂದು ಹೇಳುತ್ತಿದ್ದವರಿಗೆ ನುಂಗಲಾಗದ ತುಪ್ಪವಾಗಿ ಪರಿಣಮಿಸಿದೆ ಎಂದು ಆರೋಪ ಮಾಡಿದರು.

ರಾಯಚೂರಿಗೆ ಎಚ್.ಮುನಿಯಪ್ಪನವರು ಬಂದಾಗ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ. ಈಗಾಗಲೇ ತೆರೆಮರೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಹೈಕಮಾಂಡ್ ಟಿಕೆಟ್ ನೀಡುತ್ತಾರೆ ಎನ್ನುವ ಭರವಸೆ ಇದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುತ್ತಿದ್ದೇವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಗುರುಗುಂಟಾ ಮಾತನಾಡಿ,‘ಪಟ್ಟಣದ ಪ್ರತಿಯೊಂದು ವಾರ್ಡ್‌ನಲ್ಲೂ ಕಾಂಗ್ರೆಸ್ ಪಕ್ಷ ಬಲಪಡಿಸಬೇಕು. 5 ರಿಂದ 6 ಸಾವಿರ ಮತಗಳಿಂದ ರವಿ ಪಾಟೀಲ ಅವರನ್ನು ಗೆಲ್ಲಿಸಬೇಕು’ ಎಂದು ಹೇಳಿದರು.

ಅಂಜದ್ ಸೇಠ್, ಶಾಂತಪ್ಪ ಆನ್ವರಿ, ಅಹ್ಮದ್ ಬಾಬಾ, ಜಿ.ಶ್ರೀನಿವಾಸ ಹಾಗೂ ಶಂಶುದ್ದಿನ್ ಮಾತನಾಡಿದರು.

ಮುಖಂಡರಾದ ಜೆ.ಸುಭಾನ್, ನಿಂಗಪ್ಪ, ರಂಗನಾಥ ಮುಂಡರಗಿ, ದೇವೆಂದ್ರಪ್ಪ, ಮಹಿಬೂಬ್ ಮೆಕ್ಯಾನಿಕ್, ಕನಕರಾಜಗೌಡ, ಮೌಲಾಬಾಬ, ಬುಜ್ಜ ನಾಯಕ, ಸದಾನಂದ, ರಾಜಶೇಖರ ನಾಯಕ, ಮುಕ್ತಾರ್, ಸೈಯದ್ ಪಾಷಾ, ದುರುಗಮ್ಮ, ಸಿದ್ದಪ್ಪ ಮುಂಡರಗಿ, ದುರುಗಣ್ಣ ನಾಯಕ ಹಾಗೂ ಬಾಬು ನಾಯಿಕೊಡಿ ಉಪಸ್ಧಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT