ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಯಡಿಯೂರಪ್ಪ ಇಳಿಯಬೇಕಿದ್ದ ಹೆಲಿಪ್ಯಾಡ್ ಜಾಗದಲ್ಲಿ ಸ್ಥಗಿತವಾದ ರೂಲರ್: ಆತಂಕ

Last Updated 13 ಜನವರಿ 2020, 7:59 IST
ಅಕ್ಷರ ಗಾತ್ರ

ರಾಯಚೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆತರುವ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಲು ನಿರ್ಮಾಣ ಮಾಡಿರುವ ಹೆಲಿಪ್ಯಾಡ್ ಪಕ್ಕದ ನೆಲವನ್ನು ಸಮತಟ್ಟು ಮಾಡುತ್ತಿದ್ದ ರೂಲರ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದರಿಂದ ಸುಮಾರು 20 ನಿಮಿಷ ಪೊಲೀಸರು ಮತ್ತು ಅಧಿಕಾರಿಗಳು ಆತಂಕ ಅನುಭವಿಸಿದ ಪ್ರಸಂಗ ಜಿಲ್ಲೆಯ ದೇವದುರ್ಗ ತಾಲ್ಲೂಕು ತಿಂಥಣಿ ಸೇತುವೆ ಬಳಿ ಸೋಮವಾರ ಬೆಳಿಗ್ಗೆ ನಡೆಯಿತು.

ಬಳ್ಳಾರಿಯಿಂದ ಬೆಳಿಗ್ಗೆ 11.30ಕ್ಕೆ ಹೆಲಿಕಾಪ್ಟರ್ ಮೂಲಕ ಹೊರಟಿದ್ದು, ಮಧ್ಯಾಹ್ನ 12.15 ಕ್ಕೆ ತಿಂಥಣಿ ತಲುಪಲಿದೆ. ಈ ಮಧ್ಯೆ 11.30ಕ್ಕೆ ರೂಲರ್ ಕೆಟ್ಟು ನಿಂತುಕೊಂಡಿತ್ತು. ಕೊನೆಗೂ ಹರಸಾಹಸ ಮಾಡಿ, ಹೆಲಿಪ್ಯಾಡ್ ಜಾಗದಿಂದ ರೂಲರ್ ತೆರವು ಮಾಡಿಸಲಾಗಿದ್ದು, ಆನಂತರ ಅಧಿಕಾರಿಗಳು ನೆಮ್ಮದಿ ನಿಟ್ಟಿಸಿರು ಬಿಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT