ಗುರುವಾರ , ಜನವರಿ 23, 2020
28 °C

ಚನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ಲಿಂಗೈಕ್ಯ ಚನ್ನಮಲ್ಲ‌ ಶಿವಯೋಗಿಗಳ 64 ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಮಸ್ಕಿ ತಾಲ್ಕೂಕಿನ ಮೆದಕಿನಾಳ ಗ್ರಾಮದಲ್ಲಿ ಪೂರ್ಣ ಕುಂಭ ಹಾಗೂ ಭಾವಚಿತ್ರದ ಮೆರವಣಿಗೆ ಡಾ.‌ಚನ್ನಮಲ್ಲ‌ ಸ್ವಾಮಿಗಳ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ ಗಂಗಾ ಸ್ಥಳದಿಂದ ಆರಂಭಗೊಂಡ ಪೂರ್ಣಕುಂಭದ ಮೆರವಣಿಗೆ ಪ್ರಮುಖ‌ ಬೀದಿಗಳಲ್ಲಿ ನಡೆಯಿತು

ಗ್ರಾಮದ‌  ಮಹಿಳೆಯರು ಪೂರ್ಣ ಕುಂಭ ಹಾಗೂ ಕಳಸದೊಂದಿಗೆ ಪಾಲ್ಗೊಂಡಿದ್ದರು. ಡೊಳ್ಳು ಕುಣಿತ ಸೇರಿ  ವಿವಿಧ ಜಾನಪದ ಕಲಾ ತಂಡಗಳು ‌ಗಮನ ಸೆಳೆದವು.

ಚನ್ನಮಲ್ಲ ಶಿವಯೋಗಿಗಳ ಮಠದಲ್ಲಿನ ಕರ್ತೃ ಗದ್ದುಗೆಗೆ ಗಂಗಾ ಸ್ಥಳದಿಂದ ಪೂರ್ಣ ಕುಂಭದಲ್ಲಿ ತರಲಾಗಿದ್ದ ಜಲ‌ದಿಂದ ಅಭಿಷೇಕ ಮಾಡಲಾಯಿತು. ವಿವಿಧ ಧಾರ್ಮಿಕ ಪೂಜಾ‌ ಕಾರ್ಯಕ್ರಮಗಳು‌ ಜರುಗಿದವು.

ಭಕ್ತರಿಗೆ ಅನ್ನ‌ಸಂತರ್ಪಣೆ  ಏರ್ಪಡಿಸಲಾಗಿತ್ತು.‌ ಸಂಜೆ ಪ್ರವಚನ ಮಂಗಲ‌ ನಡೆಯಿತು. ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಜನ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು