ಗ್ರಾಮ ವಾಸ್ತವ್ಯಕ್ಕೆ ಹೋಗುವಾಗ ಸಿಎಂ ಬಸ್‌ಗೆ ಟಿಎಲ್‌ಬಿಸಿ ಕಾರ್ಮಿಕರಿಂದ ಅಡ್ಡಿ

ಮಂಗಳವಾರ, ಜೂಲೈ 16, 2019
23 °C

ಗ್ರಾಮ ವಾಸ್ತವ್ಯಕ್ಕೆ ಹೋಗುವಾಗ ಸಿಎಂ ಬಸ್‌ಗೆ ಟಿಎಲ್‌ಬಿಸಿ ಕಾರ್ಮಿಕರಿಂದ ಅಡ್ಡಿ

Published:
Updated:

ರಾಯಚೂರು: ತುಂಗಭದ್ರಾ ಎಡದಂಡೆ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ ಹಾಗೂ ವೈಟಿಪಿಎಸ್ ಕಾರ್ಮಿಕರ ಸಂಘದ ಸದಸ್ಯರು ಸಿಎಂ ತೆರಳುತ್ತಿದ್ದ  ಬಸ್‌ಗೆ ಅಡ್ಡಿಯನ್ನುಂಟು ಮಾಡಿ ಪ್ರವಾಸಿ ಮಂದಿರ ಬಳಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.


ಬಸ್‌ನ ಬಾಗಿಲಲ್ಲೇ ನಿಂತು ಮುಖ್ಯಮಂತ್ರಿ ಜನರ ಜತೆ ಮಾತನಾಡಿದರು.

14 ತಿಂಗಳು ಬಾಕಿ ವೇತನ ಮತ್ತು ವಜಾಗೊಳಿಸಿದ 410 ಕಾರ್ಮಿಕರ ಪುನರ್ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಹೋರಾಟಗಾರರಿಂದ ಮುಖ್ಯಮಂತ್ರಿ ಮನವಿ ಸ್ವೀಕರಿಸಿದ ನಂತರವೂ ಹೋರಾಟಗಾರರು ಸಮಾಧಾನವಾಗಲಿಲ್ಲ, ಮತ್ತೆ ಅಡ್ಡಿಪಡಿಸಿದರು. ಇದರಿಂದ 10 ನಿಮಿಷ ಬಸ್ ನಲ್ಲಿ  ಸಿಎಂ ಕಾದು ಕುಳಿತುಕೊಳ್ಳುವಂತಾಯಿತು.

ರಸ್ತೆ ತಡೆ ಮಾಡಿದ ಹೋರಾಟ ಗಾರರನ್ನು ತೆರವುಗೊಳಿಸಲು ಪೊಲೀಸರು ಮತ್ತು ಅಧಿಕಾರಿಗಳು ಹರಸಾಹಸ ಪಟ್ಟರು.


ಪ್ರತಿಭಟನೆಗೆ ಮುಂದಾದವರನ್ನು ಪೊಲೀಸರು ತಡೆದರು.

* ಇವನ್ನೂ ಓದಿ...

* ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ₹3 ಸಾವಿರ ಕೋಟಿ: ಮುಖ್ಯಮಂತ್ರಿ

ಜಲಧಾರೆ ಯೋಜನೆ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು- ಸಿಎಂ

ಗ್ರಾಮ ವಾಸ್ತವ್ಯ| ರಾಯಚೂರಿಗೆ ಬಂದಿಳಿದ ಸಿಎಂ, ಕಾರ್ಮಿಕ ಹೋರಾಟ ಬಿಸಿ ತಟ್ಟುವುದೇ?

ಬರಹ ಇಷ್ಟವಾಯಿತೆ?

 • 0

  Happy
 • 6

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !