ಶುಕ್ರವಾರ, ಮೇ 14, 2021
32 °C

ಉಪಚುನಾವಣೆ ಬಳಿಕ ಕಾಂಗ್ರೆಸ್‌ಗೆ ಎಲ್ಲಿಯೂ ವಿಳಾಸ ಇರುವುದಿಲ್ಲ: ಬಿ.ಎಸ್.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರ್ವಿಹಾಳ (ರಾಯಚೂರು): 'ಉಪಚುನಾವಣೆ ಬಳಿಕ ಎಲ್ಲಿಯೂ ಕಾಂಗ್ರೆಸ್ ವಿಳಾಸ ಇರುವುದಿಲ್ಲ. ಎಲ್ಲ‌ ಕಡೆಗೂ ಬಿಜೆಪಿ ಗಾಳಿ ಬೀಸುತ್ತಿದೆ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತುರ್ವಿಹಾಳದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿ, 'ಪ್ರತಾಪಗೌಡ ‌ಪಾಟೀಲ ಅವರನ್ನು ಆಯ್ಕೆ ಮಾಡಿ, ಈ ಭಾಗದ ಸೇವೆ ಮಾಡಲು ಅವಕಾಶ ಕೊಡಿ. ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುವುದು. ಚುನಾವಣೆ ಬಳಿಕ ಎಲ್ಲ ರೀತಿಯ ಬೇಡಿಕೆಗಳನ್ನು ಈಡೇರಿಸಿ, ಅಭಿವೃದ್ಧಿ ಮಾಡಲಾಗುವುದು' ಎಂದು‌ ಭರವಸೆ ನೀಡಿದರು.

'ಕಾಂಗ್ರೆಸ್ ನವರು ಜಾತಿಯ ವಿಷಬೀಜ ಬಿತ್ತಿ ಗೆಲ್ಲುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. 25 ಸಾವಿರ ಮತಗಳ ಅಂತರದಿಂದ ಪ್ರತಾಪಗೌಡ ಗೆಲ್ಲಲಿದ್ದಾರೆ. ಅನೇಕ‌ ವರ್ಷಗಳಿಂದ ಅಭಿವೃದ್ಧಿ ಪರ ಬಿಜೆಪಿ‌ ಕೆಲಸ  ಮಾಡುತ್ತಿದೆ' ಎಂದು ಹೇಳಿದರು.

'ಸರ್ಕಾರದಿಂದ ವೃದ್ಧರಿಗೆ, ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಲಾಗಿದೆ. ಒಂದೇ ಒಂದು ಮತ ವ್ಯರ್ಥ ಆಗಬಾರದು. ನೀವೆ‌ ಅಭ್ಯರ್ಥಿ ಎಂದು ತಿಳಿದು ಕಮಲಕ್ಕೆ ಮತ ನೀಡಿ' ಎಂದು ಕೋರಿದರು.
ರೈತರ ಬೇಡಿಕೆಯಂತೆ ಬತ್ತ ಖರೀದಿ ಕೇಂದ್ರ ಆರಂಭಿಸಲು ಸೂಚಿಸಲಾಗುವುದು. ₹ 1860 ದರದಲ್ಲಿ ಭತ್ತ ಖರೀದಿ ಮಾಡಲಾಗುವುದು. ₹ 2,620 ದರದಲ್ಲಿ ಜೋಳ ಖರೀದಿ ಮಾಡಲಾಗುವುದು ಎನ್ನುವ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.

ತುರ್ವಿಹಾಳ ಜನರ ಬೇಡಿಕೆಯಂತೆ ಉಪಚುನಾವಣೆ ಬಳಿಕ ಆಸ್ಪತ್ರೆಯ ಉನ್ನತೀಕರಣ ಮಾಡಲಾಗುವುದು. ಗಾರ್ಮೆಂಟ್ ಸ್ಥಾಪನೆಗೆ ಪರಿಶೀಲಿಸಲಾಗುವುದು'. 'ನಾವು ಮುಸ್ಲಿಂ ವಿರೋಧಿಗಳಿಲ್ಲ.‌  ಸಾಕಷ್ಟು ‌ಅನುದಾನ ನೀಡಿದ್ದಲ್ಲದೆ, ಅನೇಕ‌ ಅಭಿವೃದ್ಧಿ ಯೋಜನೆಗಳನ್ನು ಮಾಡಲಾಗಿದೆ. ಕಾಗಿನೆಲೆ ಅಭಿವೃದ್ಧಿಗೆ ಮತ್ತೆ ಅನುದಾನ ಕೊಡಲಾಗುವುದು' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು