ಗುರುವಾರ , ಮೇ 6, 2021
23 °C

ಪ್ರತ್ಯೇಕ ಕೊಠಡಿಯಲ್ಲಿ ವಾಸ: ಕಲ್ಯಾಣಿ ಚೌದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ‘ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸೇವೆಗೆ ಸೇರುತ್ತಿದ್ದಂತೆ ಕೋವಿಡ್ ತಪಾಸಣೆಯ ಜವಾಬ್ದಾರಿ ವಹಿಸಿಕೊಂಡೆ. ಕೊರೊನಾ ಸೋಂಕು ಪರೀಕ್ಷೆಯ ಜತೆಗೆ ಆಸ್ಪತ್ರೆಗೆ ಬಂದ ರೋಗಿಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸುತ್ತಿರುವೆ. ಕೋವಿಡ್ ಬಗ್ಗೆ ಜನರು ಹೊಂದಿರುವ ಆತಂಕ, ಭಯ ನಿವಾರಿಸುವಲ್ಲಿ ಸಾಕಷ್ಟು ಅನುಭವಗಳು ಆಗಿವೆ’.

‘ಆರಂಭದಲ್ಲಿ ಸೋಂಕಿತರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಿ ಅವರನ್ನು ಪರೀಕ್ಷೆಗೆ ಒಳಪಡಿಸುವುದು ಸವಾಲಿನ ಕೆಲಸವಾಗಿತ್ತು. ಈಗ ಜನರಲ್ಲಿ ಕೋವಿಡ್ ಬಗ್ಗೆ ಅರಿವು ಬಂದಿದೆ. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುತ್ತೇನೆ. ಸ್ಥಳೀಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುವಂತೆ ಮನವೊಲಿಸುತ್ತೇನೆ. ಗುಣಮುಖರಾಗಿ ಬಂದವರು ನಂತರದ ದಿನಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸುತ್ತೇನೆ’

‘ಮನೆಯಲ್ಲಿ ತಾಯಿ ಮತ್ತು ಸಹೋದರ ಇದ್ದಾರೆ. ಒಂದು ತಿಂಗಳಿನಿಂದ ಕೋವಿಡ್ ಪ್ರಕರಣಗಳು ಹೆಚ್ಚಾದ ನಂತರ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರುತ್ತಿದ್ದೇನೆ. ಕಾಲೇಜು ದಿನಗಳಿಂದಲೂ ಸಮಾಜ ಸೇವೆ ನನ್ನ ಆದ್ಯತೆಯ ಕ್ಷೇತ್ರವಾಗಿತ್ತು. ಈಗ ನನ್ನ ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿದ್ದೇನೆ’.

ಕಲ್ಯಾಣಿ ಚೌದರಿ,
ಕೋವಿಡ್ ಪರೀಕ್ಷಾ ಸಿಬ್ಬಂದಿ,
ಕೋವಿಡ್ ಕೇರ್ ಸೆಂಟರ್ , ಮಾನ್ವಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.