ಶುಕ್ರವಾರ, ಮೇ 7, 2021
20 °C

‘ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದಗಲ್: ಕೊರೊನಾ ವೈರಸ್ ತಡೆಗಟ್ಟಲು 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್ -19 ಲಸಿಕೆ ಹಾಕಿಸಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ. ವಿರೂಪಾಕ್ಷಪ್ಪ ಅವರು ಹೇಳಿದರು.

ಮುದಗಲ್ ಪಟ್ಟಣ ಸಮೀಪದ ಮಾಕಾಪುರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹೂನೂರು ಗ್ರಾಮದಲ್ಲಿ ಕೋವಿಡ್ -19 ಲಸಿಕೆ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.

’ಲಸಿಕೆ ಬಗ್ಗೆ ಯಾವುದೇ ಆತಂಕ ಬೇಡ. ಆರೋಗ್ಯ ಇಲಾಖೆ ಸದಾ ನಿಮ್ಮೊಂದಿಗೆ ಇದೆ. ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಈ ವೈರಸ್ ಬಗ್ಗೆ ಭಯ ಪಡದೆ ಜಾಗೃತಿಯಿಂದ ಇರಬೇಕು‘ ಎಂದರು.

ಹಿರಿಯ ಆರೋಗ್ಯ ಸಹಾಯಕ ಜಲಾಲ್, ಕಿರಿಯ ಆರೋಗ್ಯ ಸಹಾಯಕ ಲಿಂಗರಾಜ ಸಿದ್ದೇಶ, ಮಹೇಶ್ವರಿ, ಗ್ರಾಮ ಪಂಚಾಯಿತಿ ಸದಸ್ಯ ವೆಂಕನಗೌಡ ಹೊಸಗೌಡ್ರ, ಬಾಲಸ್ವಾಮಿ ಕಟ್ಟಿಮನಿ, ಹೂನೂರು ಗ್ರಾಮಸ್ಥರಾದ ಶರಣಪ್ಪ ಬಾವಿಕಟ್ಟಿ, ಅಮರೇಶ ಬಾವಿಕಟ್ಟಿ, ಚಂದ್ರಕಾಂತ ಕುಲಕರ್ಣಿ, ಶ್ಯಾಮ ಸುಂದರ ಬಡಿಗೇರ, ಹನುಮಂತ, ಸಿದ್ದಣ್ಣ ನಾಯಕ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.