ಗುರುವಾರ , ಜೂನ್ 24, 2021
21 °C

ರೆಮ್‌ಡಿಸಿವಿರ್ ಸಾಗಿಸುವಾಗ‌‌‌ ಆ್ಯಂಬುಲೆನ್ಸ್ ಚಾಲಕ ಸೆರೆ: ವಿಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರೆಮ್‌ಡಿಸಿವಿರ್ ಚುಚ್ಚುಮದ್ದನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ನಗರದ ಓಪೆಕ್ ಆಸ್ಪತ್ರೆಯ ಆ್ಯಂಬುಲನ್ಸ್ ಚಾಲಕನನ್ನು ಸಾರ್ವಜನಿಕರೆ ಸೆರೆಹಿಡಿದಿರುವ ವಿಡಿಯೊ ವೈರಲ್‌ ಆಗಿದೆ.

ಆಸ್ಪತ್ರೆಯ ಕೋವಿಡ್ ವಾರ್ಡ್ ಬಳಿ ಭಾನುವಾರ ‌‌ಬೆಳಿಗ್ಗೆ ಘಟನೆ ನಡೆದಿದೆ.

ಜನಸಂಗ್ರಾಮ ಪರಿಷತ್ ಮುಖಂಡ ಖಾಜಾ ಅಸ್ಲಂ ಪಾಷಾ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದನ್ನು ಆಧರಿಸಿ,ಆ್ಯಂಬುಲನ್ಸ್ ಚಾಲಕ ಬಂದೆಪ್ಪನನ್ನು ರಿಮ್ಸ್ ವೈದ್ಯಕೀಯ ಕಾಲೇಜು ಡೀನ್ ಅಮಾನತುಗೊಳಿಸಿದ್ದಾರೆ. ಇಲಾಖಾ ತನಿಖೆಗೆ ಸೂಚಿಸಲಾಗಿದೆ.

ರೆಮ್‌ಡಿಸಿವಿರ್ ಎರಡು ಶೀಸೆಗಳನ್ನು ಜೇಬಿನಲ್ಲಿ ಇಟ್ಟುಕೊಂಡು ತೆರಳುತ್ತಿದ್ದ ವೇಳೆ ಜನರು ಆತನನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ‌ ಅಕ್ರಮ ಬಯಲಾಗಿದೆ.

ಇದನ್ನೂ ಓದಿ... Karnataka Covid-19 Update: ರಾಜ್ಯದಲ್ಲಿಂದು 34,804 ಹೊಸ ಪ್ರಕರಣ, 143 ಸಾವು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು