ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ ಅನಾವರಣಕ್ಕೆ ವೇದಿಕೆ; ಅನಂತರಾಜ ನಾಯಕ

Last Updated 8 ಮೇ 2022, 4:08 IST
ಅಕ್ಷರ ಗಾತ್ರ

ಅರಕೇರಾ (ದೇವದುರ್ಗ): ಗ್ರಾಮೀಣ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದರೆ ಸ್ಥಳೀಯ ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಅವಕಾಶ ಲಭಿಸಲಿದೆ ಎಂದು ಬಿಜೆಪಿ ಮುಖಂಡ ಕೆ ಅನಂತರಾಜ ನಾಯಕ ಹೇಳಿದರು.

ಗ್ರಾಮದಲ್ಲಿ ರಂಜಾನ್ ಅಂಗ ವಾಗಿ ಶಾಸಕ ಕೆ.ಶಿವನಗೌಡ ನಾಯಕ ಪ್ರಾಯೋಜಕತ್ವದಲ್ಲಿ ಆಯೋಜಿ ಸಿದ್ದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ದಲ್ಲಿ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಬಹುತೇಕರಲ್ಲಿ ಪ್ರತಿಭೆ ಇರುತ್ತದೆ. ಆದರೆ, ಅದನ್ನು ಪ್ರದರ್ಶಿಸಲು ಅವಕಾಶ ಸಿಗುವುದಿಲ್ಲ. ಪ್ರೌಢ ಶಾಲೆ, ಕಾಲೇಜು ಹಂತದ ವಿದ್ಯಾರ್ಥಿಗಳು ಇಂತಹ ಪಂದ್ಯಾವಳಿಯಲ್ಲಿ ತಮ್ಮ ಸಾಮರ್ಥ್ಯ ತೋರಿಸಿಬೇಕು. ಬಳಿಕ ವಿಶ್ವವಿದ್ಯಾಲಯ, ರಣಜಿಯಂತಹ ತಂಡಗಳಲ್ಲಿ ಆಡಲು ಅವಕಾಶ ದೊರೆಯುತ್ತದೆ ಎಂದು ತಿಳಿಸಿದರು.

ಆಟದಲ್ಲಿ ಸೋಲು– ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಕ್ರೀಡೆ ಅಥವಾ ಜೀವನದಲ್ಲಿ ಸೋತಾಗ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಹೊರತು ಆತ್ಮವಿಶ್ವಾಸ ಕಳೆದು ಕೊಳ್ಳಬಾರದು ಎಂದು ಹೇಳಿದರು.

ಜಿ.ಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ, ಶರಣಪ್ಪ ಬುದ್ದಿನ್ನಿ, ರಾಚಯ್ಯಸ್ವಾಮಿ ಮಠಪತಿ, ವಾಸುದೇವ ನಾಯಕ, ನಾಗರಾಜ ನಾಯಕ ಕರ್ನಾಳ, ಇಮ್ರಾನ್, ದಾವುದ್, ಸಲೀಂ ಸಾಬ್, ಗ್ರಾ.ಪಂ ಸದಸ್ಯ ವೆಂಕಟೇಶ ನಾಯಕ, ಇಸ್ಮಾಯಿಲ್ ಸಾಬ್, ಕಾಸೀಂ ಟೈಲರ್, ಪಂದ್ಯದ ವ್ಯವಸ್ಥಾಪಕರಾದ ಕೆ.ಭಗವಂತ್ರಾಯ ನಾಯಕ ಜುಟಮರಡಿ, ರವಿನಾಯಕ, ಹನ್ಮಂತ್ರಾಯ ಪೂಜಾರಿ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT