ರಾಯಚೂರು: ‘ಪ್ರತಿಯೊಂದು ಬ್ಯಾಂಕ್ನಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ಸೈಬರ್ ಸಹಾಯವಾಣಿ 1930 ಹಾಗೂ ಸೈಬರ್ ಅಪರಾಧಗಳ ತಡೆಗಟ್ಟಲು ಜಾಗೃತಿ ಸಂದೇಶಗಳ ನಾಮಫಲವನ್ನು ಹಾಕಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಸೂಚಿಸಿದರು.

ನಗರದ ಪೊಲೀಸ್ ಮುಖ್ಯಾಲಯದಲ್ಲಿ ನಡೆದ ಜಿಲ್ಲೆಯ ಎಲ್ಲ ಬ್ಯಾಂಕ್ ವ್ಯವಸ್ಥಾಪಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಪೊಲೀಸ್ ಠಾಣೆಗಳಲ್ಲಿ ಇರುವಂತೆ ಬ್ಯಾಂಕ್ ನಲ್ಲೂ ಸಿಸಿ ಕ್ಯಾಮೆರಾ ಗಳು ಒಂದು ವರ್ಷದ ವರೆಗೂ ಮಾಹಿತಿ ಸಂಗ್ರಹ ಇರುವಂತೆ ನೋಡಿಕೊಳ್ಳಬೇಕು. ಚಾಲ್ತಿ ಖಾತೆಗಳನ್ನು ತೆಗೆಯುವಾಗ ಕಡ್ಡಾಯವಾಗಿ ಸ್ಥಳ ಪರಿಶೀಲಿಸಬೇಕು. ಬ್ಯಾಂಕ್ ಗ್ರಾಹಕರು ಆನ್ಲೈನ್ ನಲ್ಲಿ ಹಣ ವರ್ಗಾವಣೆ ಮಾಡಬೇಕಾದಲ್ಲಿ ವಹಿಸಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಬೇಕು’ ಎಂದರು.

ಬ್ಯಾಂಕ್ ಮತ್ತು ಎಟಿಎಂ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಸೈಬರ್ ಅಪರಾಧಕ್ಕೆ ಒಳಗಾದಾಗ 1930 ಮುಖಾಂತರ ಬರುವ ಸಂದೇಶಗಳಿಗೆ ತಕ್ಷಣ ಅಕೌಂಟ್ಗಳನ್ನು ಫ್ರಿಜ್ ಹಾಗೂ ಹೋಲ್ಡ್ ಮಾಡಬೇಕು. ಗ್ರಾಹಕರು ಹಣವನ್ನು ಡ್ರಾ ಮಾಡಿಕೊಂಡು ಹೋಗುವಾಗ ಅವರ ಗಮನವನ್ನು ಬೇರೆಡೆಗೆ ಸೆಳೆದು ಹಣ ಕದಿಯುವ ಸಾಧ್ಯತೆ ಈ ಕುರಿತು ಗ್ರಾಹಕರಿಗೆ ತಿಳಿವಳಿಕೆ ಹೇಳಬೇಕು ಎಂದು ತಿಳಿಸಿದರು.

ಸದಾಕಾಲ ಬ್ಯಾಂಕ್ ಹಾಗೂ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್ಪಿ ವೆಂಕಟೇಶ, ರಾಯಚೂರು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸುಧೀಂದ್ರ ಹಾಗೂ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.