ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಬ್ಬರು ಸೈಕ್ಲಿಂಗ್ ಮಾಡಿ‌ ಆರೋಗ್ಯವಾಗಿರಿ: ವೈದ್ಯ ಬಸವರಾಜ ಪಾಟೀಲ

Published 7 ಜನವರಿ 2024, 7:18 IST
Last Updated 7 ಜನವರಿ 2024, 7:18 IST
ಅಕ್ಷರ ಗಾತ್ರ

ಜಾಲಹಳ್ಳಿ (ರಾಯಚೂರು): ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಭಾನುವಾರ ಸ್ಥಳೀಯ ಸರ್ಕಾರಿ ಸಮುದಾಯ ವೈದ್ಯಾಧಿಕಾರಿ ಡಾ.ಆರ್.ಎಸ್ ಹುಲಮನಿ ಅವರು ರಾಯಚೂರಿನಿಂದ ಸೈಕ್ಲಿಂಗ್ ಮಾಡಿಕೊಂಡು ಬಂದಿರುವ ತಂಡಕ್ಕೆ ಸ್ವಾಗತಿಸಿ ಬರ ಮಾಡಿಕೊಂಡರು.

ತಂಡದ ನಾಯಕ ವೈದ್ಯ ಬಸವರಾಜ ಪಾಟೀಲ ಮಾತನಾಡಿ, 'ಪ್ರತಿಯೊಬ್ಬ ಮನುಷ್ಯ ಆರೋಗ್ಯವಾಗಿ ಇರಬೇಕಾದರೆ, ದೇಹದಂಡನೆ ಮಾಡಲೇಬೇಕು. ದೇಹದಲ್ಲಿರುವ ಬೆವರು ಬರುವಂತೆ ಕೆಲಸ ಮಾಡಬೇಕು. ಅಗಲೇ ಸಣ್ಣ, ಪುಟ್ಟ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಹೇಳಿದರು.

ರಾಯಚೂರಿನ 16 ಜನ ವೈದ್ಯರ ತಂಡ ಆರೋಗ್ಯದ ಬಗ್ಗೆ‌ ಜಾಗೃತಿ ಮೂಡಿಸಲು ಈ ಸೈಕ್ಲಿಂಗ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.

ಬೆಳಿಗ್ಗೆ 5 ಗಂಟೆಯಿಂದ ನಮ್ಮ ಪ್ರಯಾಣ ಪ್ರಾರಂಭಗೊಂಡಿದೆ. ಗುರುಗುಂಟಾ ಅಮರೇಶ್ವರ ದೇವಸ್ಥಾನದ ವರೆಗೆ 120 ಕಿ.ಮೀ ಅಂತರವನ್ನು ಕೇವಲ 7 ಗಂಟೆಯಲ್ಲಿ ಪೂರ್ಣಗೊಳಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸೈಕ್ಲಿಂಗ್ ತಂಡದಲ್ಲಿ ವೈದ್ಯರಾದ ಜಯ ಪ್ರಕಾಶ, ಸಕಲೇಶ್, ನಾಗರಾಜ, ಶರಣಗೌಡ, ಮಂಜುನಾಥ, ಸುನೀಲ್, ರಾಘವೇಂದ್ರ, ರವಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT