ದೇವಸೂಗೂರು: ಗೋವು ಪೂಜೆ ಆಚರಣೆ

ದೇವಸೂಗೂರು (ಶಕ್ತಿನಗರ): ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸೂಗೂರು ಗ್ರಾಮದ ಸೂಗೂರೇಶ್ವರ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ದೀಪಾವಳಿ ಬಲಿಪಾಡ್ಯಮಿ ದಿನದಂದು ಶಾಸಕ ಬಸನಗೌಡ ದದ್ದಲ್ ಅವರು ಕುಟುಂಬದೊಂದಿಗೆ ಆಗಮಿಸಿ ಗೋವು ಪೂಜೆ ಸಲ್ಲಿಸಿದರು.
ಸೂಗೂರೇಶ್ವರ ಸ್ವಾಮಿಯ ದೇವಸ್ಥಾನದ ಪ್ರಧಾನ ಅರ್ಚಕ ಬಿ.ರಮೇಶ ಸಾನ್ನಿಧ್ಯದಲ್ಲಿ ಹಸುಗೆ ಸ್ನಾನ ಮಾಡಿಸಿ, ಅರಿಶಿನ, ಕುಂಕುಮ ಹೂವುಗಳಿಂದ ಅಲಂಕರಿಸಿ, ಅಕ್ಕಿ ಬೆಲ್ಲ, ಸಿಹಿ ತಿನಿಸುಗಳನ್ನು ನೀಡಿ, ಮಂಗಳಾರತಿ ಪೂಜೆ ಸಲ್ಲಿಸುವ ಮೂಲಕ ಗೋವು ಪೂಜೆ ನೆರವೇರಿಸಲಾಯಿತು.
ಸೂಗೂರೇಶ್ವರ ಸ್ವಾಮಿಯ ದೇವಸ್ಥಾನ ಕಚೇರಿಯ ಕಾರ್ಯ ನಿರ್ವಹಕಾಧಿಕಾರಿ ಪಿ.ಶಾಂತಮ್ಮ ಹಡಗಲಿ ಅವರು ಮಾತನಾಡಿ, ಅನಾದಿ ಕಾಲದಿಂದಲೂ ಹಿಂದೂ ಧರ್ಮದವರು ದೇಶದಲ್ಲಿ ಗೋಮಾತೆಯನ್ನು ಕಾಲ ಕಾಲಕ್ಕೆ ಅನುಗುಣವಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಟ್ಟಣ, ನಗರಗಳಲ್ಲಿ ವಾಸಿಸುವ ಜನರು ಗೋವು ಪೂಜೆಯನ್ನು ಮರೆತು ಬಿಡುತ್ತಿದ್ದಾರೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಅಪಾರ ಗೌರವವಿದ್ದು, ಪೂಜಿಸುವ ಸಂಪ್ರದಾಯವೂ ಇದೆ. ಮುಂದಿನ ಪೀಳಿಗೆಗೆ ಗೋವುಗಳ ಪೂಜೆಯನ್ನು ಪರಿಚಯಿಸಿ, ವಿಧಿ ವಿಧಾನಗಳನ್ನು ಸಂಪ್ರದಾಯವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ, ದೀಪಾವಳಿ ಬಲಿಪಾಡ್ಯದಿನದಂದು ಸರ್ಕಾರ ಗೋಪೂಜೆ ನಡೆಸುವ ಕಾರ್ಯ ಜಾರಿಗೊಳಿಸಿದೆ ಎಂದರು.
ದೇವಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗನಗೌಡ ದೊಡ್ಡಿ, ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಪ್ಪ ಡೋಣಿ, ಕಂದಾಯ ನಿರೀಕ್ಷಕ ಮುನಿಭೂಪತಿ, ಗ್ರಾಮಲೆಕ್ಕಾಧಿಕಾರಿ ಸುರೇಶ, ಪಶು ವೈದ್ಯ ಮಹಾದೇವಪ್ಪ, ದೇವಸ್ಥಾನದ ವ್ಯವಸ್ಥಾಪಕ ಶ್ರೀಕಾಂತ, ನವೀನ, ಚನ್ನಬಸವ, ಎಂ.ನರಸನಗೌಡ, ಹಂಪನಗೌಡ ಪೊಲೀಸ್ ಪಾಟೀಲ, ಪ್ರಕಾಶಯ್ಯನಂದಿ, ವಿ.ಬಾಬು, ವೆಂಕಟೇಶ, ಬಸವರಾಜಪ್ಪಗೌಡ ಪೊಲೀಸ್ ಪಾಟೀಲ,ರಂಗನಗೌಡ, ಬಸವರಾಜ ವಕೀಲ, ಶಶಿಕಲಾ ಭೀಮರಾಯ, ಜ್ಯೋತಿ ಮತ್ತು ಸೂಗೂರೇಶ್ವರ ದೇವಸ್ಥಾನದ ಸೇವಾ ಸಮಿತಿಯ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಆರ್‌ಟಿಪಿಎಸ್ ವಿವಿಧ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.