ಸಿಂಧನೂರು: ‘ಚೆಸ್ ಬುದ್ದಿವಂತರ ಆಟವಾಗಿದೆ. ಇದನ್ನು ನಿರಂತರವಾಗಿ ಆಡುವುದರಿಂದ ಮನುಷ್ಯನ ಜ್ಞಾನ ಮತ್ತು ಏಕಾಗ್ರತೆ ವಿಕಸನವಾಗುತ್ತದೆ’ ಎಂದು ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ನೇತೃತ್ವದಲ್ಲಿ ಸರ್ಕಾರಿ ಶಾಲೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಕ್ತ ಚೆಸ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚೆಸ್ ಸ್ಪರ್ಧೆ ನಡೆಯುವುದು ಸಾಮಾನ್ಯ. ಆದರೆ ಗ್ರಾಮೀಣ ಮಟ್ಟದಲ್ಲಿ ಈ ಸ್ಪರ್ಧೆ ಏರ್ಪಡಿಸಿ ಈ ಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವ ಹಳೆ ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯ ಅತ್ಯಂತ ಸ್ತುತ್ಯಾರ್ಹವಾಗಿದೆ’ ಎಂದರು.

ಶಿಕ್ಷಕ ಜಗದೀಶ ಕೋರಿ ಚೆಸ್ ಆಟದ ಸ್ವರೂಪ, ನಿಯಮಗಳು ಮತ್ತು ಉಪಯೋಗದ ಬಗ್ಗೆ ತಿಳಿಸಿದರು.

ಮುಖಂಡರಾದ ಹನುಮಂತರೆಡ್ಡಿ ಬಜಾರ್, ಮಲ್ಲನಗೌಡ ಪೊಲೀಸ್ ಪಾಟೀಲ, ವಲಿಬಾಷಾ, ಮಹಾದೇವಪ್ಪ ಕುರಿ, ಎಸ್ಡಿಎಂಸಿ ಉಪಾಧ್ಯಕ್ಷ ಬಸವರಾಜ ಕುರೇರು, ವೀರೇಶ, ಬೀರಪ್ಪ ದಳಪತಿ ಉಪಸ್ಥಿತರಿದ್ದರು.

ಮುಕ್ಕಣ್ಣ ವಳಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನಬಸವ ನಿರೂಪಿಸಿದರು.

ಟೂರ್ನಿಯಲ್ಲಿ ಶಿರಸಿ, ಶಹಾಪುರ, ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಂದ ನೂರಾರು ಸ್ಪರ್ಧಾಳುಗಳು ಹಾಗೂ ಅವರ ಪಾಲಕರು ಭಾಗವಹಿಸಿದ್ದರು. ಅದರಲ್ಲೂ ಪಂಚಾಕ್ಷರಿ ಗವಾಯಿಗಳ ಆಶ್ರಮದ ಅಂಧ ವ್ಯಕ್ತಿ ಬಸವಲಿಂಗಪ್ಪ ಮಾರೆಡ್ಡಿ ಭಾಗವಹಿಸಿ ಅತ್ಯಂತ ಉತ್ಸಾಹದಿಂದ ಚೆಸ್ ಆಟ ಆಡಿದ್ದು ವಿಶೇಷವಾಗಿತ್ತು.

ವಿಜೇತರು: 16 ವರ್ಷದ ಒಳಗಿನ ಸ್ಪರ್ಧೆಯಲ್ಲಿ ಬಳ್ಳಾರಿಯ ಬೋಗಲ್ ವೇದಾಂತ್ ಪ್ರಥಮ ಸ್ಥಾನ ₹5,001, ಸನ್ನಿಧಿ ಬೋಗಲ್ ದ್ವಿತೀಯ ಸ್ಥಾನ ₹3,001, ರಾಯಚೂರಿನ ಪ್ರಸನ್ನಕುಮಾರ ತೃತೀಯ ಸ್ಥಾನ ₹2,001, 16 ವರ್ಷದಿಂದ 60 ವರ್ಷದೊಳಗಿನ ಸ್ಪರ್ಧೆಯಲ್ಲಿ ರಾಯಚೂರಿನ ಪ್ರಸನ್ನ ಪ್ರಥಮ ಸ್ಥಾನ ಪಡೆದು ₹15,001, ಗದುಗಿನ ಬಸವಲಿಂಗಪ್ಪ ಮಾರೆಡ್ಡಿ ದ್ವಿತೀಯ ಸ್ಥಾನ ₹8,001, ಶಿರಸಿಯ ರಾಮಚಂದ್ರ ಭಟ್ ತೃತೀಯ ಸ್ಥಾನ ₹5,001 ನಗದು ಬಹುಮಾನ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.