ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಹಾಸ್ಟೆಲ್‌ಗಳಿಗೆ ಡಿಸಿ ದಿಢೀರ್ ಭೇಟಿ

Published 11 ಜುಲೈ 2024, 15:22 IST
Last Updated 11 ಜುಲೈ 2024, 15:22 IST
ಅಕ್ಷರ ಗಾತ್ರ

ರಾಯಚೂರು: ನಗರದ ಆಶಾಪುರ ರಸ್ತೆಯಲ್ಲಿರುವ ಬಾಲಕ, ಬಾಲಕಿಯರ ವಸತಿ ನಿಲಯಗಳಿಗೆ ಬುಧವಾರ ರಾತ್ರಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ವಸತಿ ನಿಲಯದ ಊಟ ಉಪಾಹಾರ ವ್ಯವಸ್ಥೆಯನ್ನು ಪರಿಶೀಲಿಸಿ, ‘ವಸತಿ ನಿಲಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ನೀಡಬೇಕು. ಶುಚಿತ್ವ ಕಾಪಾಡಬೇಕು’ ಎಂದು ಮೇಲ್ವಿಚಾರಕರಿಗೆ ಸೂಚಿಸಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಊಟ ಮಾಡಿ ಗುಣಮಟ್ಟ ಅವಲೋಕಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತತದಾರ್, ಪ್ರಾಂಶುಪಾಲ ಕಲ್ಪನಾ ಬಿರಾದಾರ, ನಿಲಯಪಾಲಕ ಹುಲಿಗೆಪ್ಪ, ಸಹ ಶಿಕ್ಷಕರಾದ ಸಾಬುಗೌಡ, ಶಾಂತಮೂರ್ತಿ, ವೆಂಕಟೇಶ, ಭೀಮೇಶ್, ಶಾಂತಲಾ, ನಾಗರತ್ನ, ರಮೇಶ, ಸರ್ವಮಂಗಳ, ರೆಹೇನ ಬೇಗಂ, ಈರಣ್ಣ, ಲೋಕೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT