ಮಸ್ಕಿ: ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಿ ಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳಲು ಪಟ್ಟಣದ ಜನತೆ ಸಿದ್ದತೆ ನಡೆಸಿದ್ದಾರೆ.

ಅಂಗಡಿಗಳಿಗೆ ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.

ಅಮಾವಾಸ್ಯೆ ಸೋಮವಾರ ಸಂಜೆಯಿಂದ ಕೂಡುತ್ತಿರುವುದರಿಂದ ಸೋಮವಾರ ರಾತ್ರಿಯಿಂದಲೇ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಶುರುವಾಗಿದೆ.

ಮಂಗಳವಾರ ಹಾಗೂ ಬುಧವಾರ ದೀಪಾವಳಿ ಹಬ್ಬ ಆಚರಿಸುತ್ತಿದ್ದು, ಪೂಜೆಗಾಗಿ ಬಗೆಬಗೆಯ ಹೂವು–ಹಣ್ಣು ಸೇರಿ ಪೂಜಾ ಸಾಮಗ್ರಿ ಖರೀದಿಗೆ ಬೀದಿ ವ್ಯಾಪಾರಿಗಳು ಸೇರಿದಂತೆ ಪ್ರಮುಖ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿದ್ದಾರೆ.

ಪಟ್ಟಣದ ಚೆನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಚಂಡಿ, ಶಾವಂತಗಿ, ಮಲ್ಲಿಗೆ ಸೇರಿದಂತೆ ಹೂವುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಒಂದು ಕೆ.ಜಿ ಚಂಡು, ಸೇವಂತಗಿ ದರ ₹100 ಇದೆ. ಕರಿ ಕುಂಬಳಕಾಯಿ ₹100 ರಿಂದ ₹150 ಕ್ಕೆ ಮಾರಾಟವಾಗುತ್ತಿದೆ. ಬಾಳೆ ಹಣ್ಣಿನ ಗೊನೆ ಒಂದಕ್ಕೆ ₹350ರಿಂದ ₹ 400 ತೆಗೆದುಕೊಳ್ಳ ಲಾಗುತ್ತಿದೆ. ಬಾಳೆ ದಿಂಡು, ಎಲೆ ಮಾರಾಟ ಜೋರಾಗಿದೆ.

ಹಳೆಯ ಬಸ್ ನಿಲ್ದಾಣದಲ್ಲಿ ಸರ್ವಿಸ್ ರಸ್ತೆ, ಪಾದಚಾರಿ ಮಾರ್ಗದ ಮೇಲೆ ಹೂವಿನ ಅಂಗಡಿಗಳನ್ನು ಹಾಕಿ ಜನರನ್ನು ಆಕರ್ಷಿಸುತ್ತಿದ್ದಾರೆ. ಪ್ರಮುಖ ಹಣ್ಣು ಹಾಗೂ ಹೂವಿನ ಅಂಗಡಿಗಳ ಮುಂದೆ ಶಾಮಿಯಾನ ಹಾಕಿ ಅಲಂಕಾರ ಮಾಡಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ದೀಪಾವಳಿ ಹಬ್ಬಕ್ಕೆ ಎಲ್ಲಾ ಬಗೆಯ ಹೂವು ತರಲಾಗಿದೆ. ಗ್ರಾಹಕರ ಸಂಖ್ಯೆ ನೋಡಿಕೊಂಡು ಹೆಚ್ಚಿನ ಹೂವು ತರಿಸಲಾಗುವುದು

-ಮೈಬೂಸಾಬ್ ಹೂವಿನ ವ್ಯಾಪಾರಿ

ಪಟಾಕಿ ಅಂಗಡಿಗಳ ಮುಂದೆ ಸಾಲು ಪೋಲಿಸ್ ಠಾಣೆ ಪಕ್ಕದಲ್ಲಿ ಪಟಾಕಿ ಮಾರಲು ಪುರಸಭೆ ಹಾಗೂ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ. ವಿಶ್ವಬುಕ್ ಸ್ಟಾಲ್ ಹಾಗೂ ಅಚ್ಚಾ ರವಿ ಅಂಗಡಿಯವರು ಎರಡು ದಿನಗಳಿಂದ ಶೆಡ್ ಹಾಕಿ ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಪಟಾಕಿ ಖರೀದಿಸಲು ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಜನ ಆಗಮಿಸುತ್ತಿದ್ದಾರೆ. ಹಸಿರು ಪಟಾಕಿ ಜೊತೆಗೆ ವಿವಿಧ ಪಟಾಕಿ ಖರೀದಿ ಜೋರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.