ಮುದಗಲ್: ನರೇಗಾ ಯೋಜನೆಯ ಸಾಮಾಗ್ರಿ ಪೂರೈಕೆ ಗುತ್ತಿಗೆಯನ್ನು ತೇಜಸ್ವಿನಿ ಏಜೆನ್ಸಿಗೆ ನೀಡಬೇಡಿ ಎಂದು ಸಮೀಪದ ತಲೇಖಾನ ಗ್ರಾಮ ಪಂಚಾಯಿತಿ ಸದಸ್ಯರು ಪಿಡಿಒಗೆ ಮನವಿ ಪತ್ರ ಸಲ್ಲಿಸದರು.
ತೇಜಸ್ವಿನಿ ಏಜೆನ್ಸಿ ನರೇಗಾ ಕಾಮಗಾರಿಗಳ ಸಾಮಗ್ರಿಗಳ ಸಮರ್ಪಕವಾಗಿ ಪೂರೈಸಿಲ್ಲ. ಕಾಮಗಾರಿ ಪೂರ್ಣಗೊಳಿಸುವಲ್ಲಿ ಸಹಕರಿಸಿಲ್ಲ. ಇದರಿಂದ ಅನೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. 2024-25ನೇ ಸಾಲಿನ ನರೇಗಾ ಯೋಜನೆಗೆ ಕರೆಯಲಾದ ಸಾಮಗ್ರಿ ಪೂರೈಕೆ ಗುತ್ತಿಗೆಯನ್ನು ನೀಡದಂತೆ ತಡೆಹಿಡಿಯಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರು ಲಿಖಿತ ಮನವಿ ಸಲ್ಲಿಸಿದರು. ಮನವಿ ಪತ್ರವನ್ನ ಅಧ್ಯಕ್ಷೆ ಉಮ್ಮವ್ವ ರಾಠೋಡ್ ಹಾಗೂ ಪಿಡಿಒ ವಿಶ್ವನಾಥ ಸ್ವೀಕರಿಸಿದರು.