ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ವಿದ್ಯುತ್ ಅವಘಡ; ಲಕ್ಷಾಂತರ ಮೌಲ್ಯದ ಟೈಲ್ಸ್ ನಾಶ

Published 19 ಮಾರ್ಚ್ 2024, 15:12 IST
Last Updated 19 ಮಾರ್ಚ್ 2024, 15:12 IST
ಅಕ್ಷರ ಗಾತ್ರ

ರಾಯಚೂರು: ನಗರದ ಗೋಶಾಲ ರಸ್ತೆಯ ಕಜಾರಿಯ ಟೈಲ್ಸ್ ಅಂಗಡಿಯಲ್ಲಿ ಸೋಮವಾರ ತಡರಾತ್ರಿ ವಿದ್ಯುತ್ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಾಗ್ರಿ ನಾಶವಾಗಿದೆ.

ವಿದ್ಯುತ್ ಸ್ಪರ್ಶದಿಂದ (ಶಾರ್ಟ್ ಸರ್ಕಿಟ್) ಅವಘಡ ಸಂಭವಿಸಿದ್ದು, ತೀವ್ರ ಸ್ವರೂಪದ ಬೆಂಕಿ ಕಾಣಿಸಿಕೊಂಡು ಪಕ್ಕದ ಅಂಗಡಿ ಹಾಗೂ ಭಾಲ್ಕಿ ಆಸ್ಪತ್ರೆಗೆ ಬೆಂಕಿ ತಗುಲಿದೆ. 

ಅಗ್ನಿ ದುರಂತದಲ್ಲಿ ಗೋದಾಮಿನಲ್ಲಿ ಸಂಗ್ರಹಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಟೈಲ್ಸ್ ಸುಟ್ಟಿವೆ. ಅಗ್ನಿ ಶಾಮಕದಳ ಬೆಂಕಿ ನಂದಿಸಿದ್ದಾರೆ. ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೆಂಕಿ ಕಾಣಿಸಿಕೊಂಡಾಗ ಆಸ್ಪತ್ರೆಯ ಸಿಬ್ಬಂದಿ ತಕ್ಷಣ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಆಸ್ಪತ್ರೆಗೆ ಬೆಂಕಿ ವಿಸ್ತರಿಸಿದ ಕಾರಣ ತುರ್ತಾಗಿ ಒಳ ರೋಗಿಗಳನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಯಿತು. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ’ ಎಂದು ಭಾಲ್ಕಿ ಆಸ್ಪತ್ರೆಯ ಡಾ.ನಾಗರಾಜ ಬಾಲ್ಕಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT