ಸಿಂಧನೂರು: ಭಾರತದ ಶೇ 72 ರಷ್ಟು ಭಾಗವು ಗ್ರಾಮೀಣ ಪ್ರದೇಶದಿಂದ ಕೂಡಿದ್ದು ಗ್ರಾಮಗಳ ಸರ್ವತ್ತೋಮುಖ ಅಭಿವೃದ್ಧಿಯಾದರೆ ಜನರ ಬದುಕು ಹಸನವಾಗುತ್ತದೆ ಎಂಬುದು ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು ಎಂದು ಯುವ ಕಾಂಗ್ರೆಸ್ ಘಟಕದ ಮಾಜಿ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ ಹೇಳಿದರು.

ತಾಲ್ಲೂಕಿನ ಗಾಂಧಿನಗರ ಗ್ರಾಮದಲ್ಲಿ ಶನಿವಾರ ನಡೆದ ‘ಗಾಂಧಿ ನಡಿಗೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

75ನೇ ಸ್ವಾತಂತ್ರ್ಯೋತ್ಸವವನ್ನು ಮಹಾತ್ಮ ಗಾಂಧೀಜಿಯವರ ಸವಿ ನೆನಪಿಗಾಗಿ ಒಂದು ತಿಂಗಳ ಪರ್ಯಾತ ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್’ ಕಾರ್ಯಕ್ರಮವನ್ನು ಎಲ್ಲಾ ಗ್ರಾಮ ಪಂಚಾಯಿತಿವಾರು ಆಚರಿಸಲಾಗುತ್ತಿದೆ. ಗ್ರಾಮ ಸ್ವರಾಜ್, ಪಾನ ನಿಷೇಧ, ಅಸಮಾನತೆ ಇಂದಿಗೂ ಸಾಕಾರಗೊಂಡಿಲ್ಲ. ಹೀಗಾಗಿ ಅವರ ಕನಸು ನನಸಾಗಿಸಲು ಪ್ರತಿಯೊಬ್ಬರು ಗಾಂಧೀಜಿಯವರ ತತ್ವ, ಆದರ್ಶಗಳನ್ನು ಮೈಗೂಡಿಸಿಗೊಳ್ಳಬೇಕು ಎಂದು ಕರೆ ನೀಡಿದರು.

‘ಶಾಸಕ ವೆಂಕಟರಾವ್ ನಾಡಗೌಡ ಅವರು ಮಹಾನ್ ಸುಳ್ಳುಗಾರರು. ಕಾಂಗ್ರೆಸ್ ಸರ್ಕಾರದಲ್ಲಿ ಬಿಡುಗಡೆಯಾದ ಅನುದಾನವನ್ನು ತಾವೇ ತಂದಿರುವುದಾಗಿಹೇಳುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಕೈಕಟ್ಟಿ ಕುಳಿತ ಶಾಸಕರು ವಿಧಾನಸಭೆಯ ಅಧಿವೇಶನದಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಪರಿಹಾರದ ಬಗ್ಗೆ ಹಾಗೂ ಭತ್ತದ ಬೆಲೆ ಕುಸಿದಿರುವಬಗ್ಗೆ ಮಾತನಾಡಲಿಲ್ಲ. ಬದಲಿಗೆ ಪರ್ಸಂಟೇಜ್ ರಾಜಕಿಯ ಮಾಡುತ್ತಿದ್ದಾರೆ‘ ಎಂದು ಬಸನಗೌಡ ಬಾದರ್ಲಿ ಆಪಾದಿಸಿದರು.

ಗಾಂಧಿನಗರದ ಗ್ರಾ.ಪಂ. ಸದಸ್ಯರಾದ ಗೋಪಿನೀಡಿ ಕೃಷ್ಣ, ಪಾಮಯ್ಯ ಕುರಿ, ರತ್ನಮ್ಮ, ಅನಂತಲಕ್ಷ್ಮಿ, ಶ್ವೇತಾ, ಜಾನಿ, ಅಮೀನ್‍ಸಾಬ, ಮಾಜಿ ಸದಸ್ಯ ಮೂಕಣ್ಣ, ಕಾಂಗ್ರೆಸ್ ಮುಖಂಡರಾದ ಎಚ್.ಎನ್.ಬಡಿಗೇರ, ವೀರನಗೌಡ, ಹನುಮಂತರಾಯ, ವೆಂಕಟೇಶ ರಾಗಲಪರ್ವಿ, ಹರಿದಾಸಪ್ಪ, ಸಿಂಹಾದ್ರಿ ಶ್ರೀನಿವಾಸ, ರಾಮಣ್ಣ, ದುರ್ಗಪ್ಪ ಬಂಡಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.