ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ ಇಂಧನ ಹೆಚ್ಚು ಪರಿಸರ ಸ್ನೇಹಿ: ನಟೇಶ

Published 19 ಏಪ್ರಿಲ್ 2024, 15:43 IST
Last Updated 19 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ರಾಯಚೂರು: 'ಪರಿಸರ ಸ್ನೇಹಿ ಅನಿಲ ಇಂಧನವನ್ನು ಕೈಗಾರಿಕೆ ಹಾಗೂ ಮನೆಗಳಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಸಾಗಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ನಟೇಶ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಎಜಿ ಆ್ಯಂಡ್‌ ಪಿ ಪ್ರಥಮ ಕಂಪನಿಯು ಸಿಟಿ ಗ್ಯಾಸ್ ವಿತರಣಾ ಕಂಪನಿ ಎಜಿ & ಪಿ ಪ್ರಥಮ್ ರ‍್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಆಯೋಜಿಸಿದ್ದ ಕೈಗಾರಿಕಾ ಜಾಗೃತಿ ಸಭೆಯಲ್ಲಿ ‘ಕೊಳವೆ ಅನಿಲವನ್ನು ಕಂಪನಿಗಳು ಆಳವಡಿಸುವುದರಿಂದ ಉಂಟಾಗಬಹುದಾದ ಪ್ರಯೋಜನಗಳು’ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಪರಿಸರ ಸ್ನೇಹಿ ಅನಿಲ ಬಳಕೆ ಉತ್ತೇಜನ ನೀಡಲು ಸರ್ಕಾರ ಒತ್ತು ನೀಡಿದೆ. ಅದರ ಮೂಲಕ ಈಗಾಗಲೇ ಮನೆ ಮನೆಗೆ ಪೈಪ್‌ಲೈನ್ ಮೂಲಕ ಸಂಪರ್ಕ ಕಾರ್ಯ ಪ್ರಗತಿಯಲ್ಲಿದೆ. ರಾಯಚೂರು ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೂ ಈ ಅನಿಲ ಬಳಕೆಯ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಯಮೇಕಿದ. ಇದು ಉದ್ಯಮಗಳಿಗೆ ಹೇಗೆ ಲಾಭದಾಯಕ ಎಂಬುದರ ಕುರಿತು ಕೈಗಾರಿಕೋದ್ಯಮಿಗಳಗೆ ಮನವರಿಕೆ ಮಾಡಿಕೊಡಬೇಕಾಗಿದೆ’ ಎಂದರು.

ಬಿಕೆಆರ್ ಉಪ ಪ್ರಾದೇಶಿಕ ಮುಖ್ಯಸ್ಥ ಜಗದೀಶ್ ಈರಣ್ಣ ಪರ‍್ಲಿ ಮಾತನಾಡಿದರು. ವಿವಿಧ ಕೈಗಾರಿಕೆಗಳ 20ಕ್ಕೂ ಅಧಿಕ ಮಧ್ಯಸ್ಥಗಾರರು ಭಾಗವಹಿಸಿದ್ದರು. ಎಜಿ & ಪಿ ಪ್ರಥಮ ಕಂಪನಿಯ ಕೃಷ್ಣಮೂರ್ತಿ ರಮೇಶ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT