ಶನಿವಾರ, ಫೆಬ್ರವರಿ 22, 2020
19 °C

ಲಿಂಗಸುಗೂರು | ಅನಾಥ ಹೆಣ್ಣು ಶಿಶು ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಯಲಗಟ್ಟಾ ಗ್ರಾಮದ ಹೊರವಲಯ ಮರದ‌ ಬುಟ್ಟಿಯಲ್ಲಿ ಬಿಟ್ಟು ಹೋಗಿದ್ದ ಹೆಣ್ಣು ಶಿಶುವನ್ನು ಗ್ರಾಮಸ್ಥರು ಭಾನುವಾರ ಬೆಳಿಗ್ಗೆ ರಕ್ಷಿಸಿದ್ದಾರೆ.

ರಸ್ತೆ ಪಕ್ಕದಲ್ಲಿ ಮಗುವೊಂದು ಅಳುತ್ತಿದ್ದ ಸದ್ದು ಕೇಳಿದ ಗ್ರಾಮಸ್ಥರು ಧಾವಿಸಿ ನೋಡಿದರು. ಬುಟ್ಟಿಯಲ್ಲಿದ್ದ ಮಗುವನ್ನು ಕಂಡು ಮನಕರಗಿ ರಕ್ಷಿಸಿದರು. ಸದ್ಯಕ್ಕೆ ಮಗು ನಗುತ್ತಾ, ಆರೋಗ್ಯವಾಗಿದೆ. ಮಗು ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದರು.

ಶಕ್ತಿನಗರ ಬಸ್‌ನಿಲ್ದಾಣದಲ್ಲಿ ಕಂಡು ಬಂದ ಗೋಡೆ ಬರಹ

ಸಿಎಎ ವಿರುದ್ಧ ಗೋಡೆ ಬರಹ

ರಾಯಚೂರು ತಾಲ್ಲೂಕಿನ ಶಕ್ತಿನಗರ ಬಸ್ ನಿಲ್ದಾಣ ಹಾಗೂ ಕೆಲವು ವಾಣಿಜ್ಯ ಮಳಿಗೆ ಕಟ್ಟಡಗಳ ಮೇಲೆ ಸಿಎಎ ಜಾರಿಗೊಳಿಸುವುದರ ವಿರುದ್ಧ ಗೋಡೆ ಬರಹ ಮಾಡಲಾಗಿದೆ.

ಯಾರು ಬರೆದಿದ್ದಾರೆ ಎಂಬುದು ಗೊತ್ತಾಗಿಲ್ಲ. ಶನಿವಾರ ತಡರಾತ್ರಿ ಗೋಡೆ ಬರಹ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದ ಐತಿಹಾಸಿಕ ಶಿಲೆಗಳ ಮೇಲೆ ಈಚೆಗೆ ಕಿಡಿಗೇಡಿಗಳು ಇಂಥ ಗೋಡೆಬರಹಗಳು ಈಚೆಗೆ ಕಂಡು ಬಂದಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)