ಶುಕ್ರವಾರ, ಜನವರಿ 21, 2022
30 °C

ರಾಯಚೂರು ಆಂಜನೇಯ ದೇವಸ್ಥಾನಕ್ಕೆ ರಾಜ್ಯಪಾಲರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ಮಹಾತ್ಮ ಗಾಂಧಿವೃತ್ತದ ಆಂಜನೇಯ ದೇವಸ್ಥಾನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಸೋಮವಾರ ಭೇಟಿ ನೀಡಿ ದರ್ಶನ ಪಡೆದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುವ ಪೂರ್ವದಲ್ಲಿ ದೇವಸ್ಥಾನಕ್ಕೆ ಆಗಮಿಸಿದರು.

ದೇವಸ್ಥಾನದ ಅರ್ಚಕರು ಮಂಗಳವಾದ್ಯದೊಂದಿಗೆ ಅವರನ್ನು ಸ್ವಾಗತಿಸಿ, ಶಾಲು ಹೊದಿಸಿ ಗೌರವಿಸಿದರು.
ಆಂಜನೇಯ ಸ್ವಾಮಿಗೆ ಆರತಿ ಬೆಳಗಿದ ರಾಜ್ಯಪಾಲರು, ಆಂಜನೇಯ ಸ್ವಾಮಿ ದರ್ಶನ ಪಡೆದು ತೆರಳಿದರು.
ಅರ್ಚಕರಾದ ಹನುಮೇಶ ಆಚಾರ್ ಹಾಗೂ ಪವನ್‌ಆಚಾರ್ ಅವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು