ಹಟ್ಟಿ ಚಿನ್ನದ ಗಣಿ: ಹಟ್ಟಿ ಅಧಿಸೂಚಿತ ಸಮಿತಿಯ ರಸ್ತೆ ಪ್ರದೇಶ ಪಕ್ಕದಲ್ಲಿ ಅಪಾರ ಕಸ ಬಿಸಾಕುತ್ತಿರುವುದರಿಂದ ಜನರಿಗೆ ರೋಗ ಹರಡುವ ಭೀತಿ ಎದುರಾಗಿದೆ.

ಹಟ್ಟಿ ಪಟ್ಟಣದ ಬೈಪಾಸ್ ರಸ್ತೆ, ಗಾಂಧಿ ಮೈದಾನ, ಹೊಸ ಬಸ್ ನಿಲ್ದಾಣ, ಜತ್ತಿ ಕಾಲೊನಿ, ಗುಂಡುರಾವ ಕಾಲೊನಿಯಲ್ಲಿ ಇರುವ ರಸ್ತೆಯಲ್ಲಿ ಕಸ ಹಾಕುತ್ತಿರುವುದರಿಂದ ವಾತಾವರಣ ಪಾದಾಚಾರಿಗಳು ಗಲೀಜು ಉಂಟಾಗಿದ್ದು, ಮೂಗು ಮುಚ್ಚಿಕೊಂಡು ನಡೆದಾಡುವಂತಾಗಿದೆ.

ಪ್ಲಾಸ್ಟಿಕ್, ಗಾಜು, ಕಸ, ಹಳೆ ಬಟ್ಟೆ, ನಿರುಪಯುಕ್ತ ವಸ್ತುಗಳು, ವೈನ್ ಶಾಪ್ನಲ್ಲಿ ಬಳಸಿದ ಖಾಲಿ ಪ್ಲಾಸ್ಟಿಕ್ ಲೋಟಗಳು, ಕೋಳಿ ಪುಕ್ಕಗಳು, ರಸ್ತೆ ಪಕ್ಕದಲ್ಲೆ ಬಿಸಾಕಿದ್ದು ರಸ್ತೆಗಳು ಗಬ್ಬೆದು ನಾರುತ್ತಿವೆ.

‘ಅಧಿಸೂಚಿತ ಪ್ರದೇಶ ವ್ಯಾಪ್ತಿಗೆ ಬರುವ ಗಾಂಧಿ ನಗರ, ಬೈಪಾಸ್ ರಸ್ತೆ ಪಕ್ಕದಲ್ಲಿ ಕಸದ ತ್ಯಾಜ್ಯ ಹರಡಿದೆ. ಪಟ್ಟಣದ ಗಾಂಧಿ ಮೈದಾನ, ಕ್ಯಾಂಪ್ ಪ್ರದೇಶದಲ್ಲಿ ಸರ್ಕಾರಿ ಶಾಲೆ ಎದುರುಗಡೆ, ಹೊಸ ಬಸ್ ನಿಲ್ದಾಣ, ಎದುರಿನ ಬೈಪಾಸ್ ರಸ್ತೆಯಲ್ಲಿ ಕಸದ ರಾಶಿ ಹಾಕಿರುದರಿಂದ ಸಾರ್ವಜನಿಕರಿಗೆ ಉಸಿರಾಟಕ್ಕೆ ತೊಂದರೆಯಾಗಿ ರೋಗ ಹೊರಡುವ ಭೀತಿ ಎದುರಾಗಿದೆ’ ಎನ್ನುತ್ತಾರೆ ಕಾಲೊನಿ ನಿವಾಸಿಗಳು.

‘ಹಟ್ಟಿಕ್ಯಾಂಪ್ ಪ್ರದೇಶದ ರಸ್ತೆಯ ಮೂಲಕ ಶಾಲೆ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು, ನಿತ್ಯ ಸಂಚಾರ ಮಾಡುತ್ತಿದ್ದು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳನ್ನು ವಿಚಾರಿಸಿದರೆ ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಮಾಡುತ್ತ ಕಾಲ ಹಗರಣ ಮಾಡುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಕಸವನ್ನು ವಿಲೇವಾರಿ ಮಾಡಿ ಜನರಿಗೆ ಅನುವು ಮಾಡಿಕೊಡಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಕರವೇ ಅಧ್ಯಕ್ಷ ಮೌನೇಶ ಕಾಕಾನಗರ ಎಚ್ಚರಿಕೆ ನೀಡಿದ್ದಾರೆ.

ಅಧಿಸೂಚಿತ ಪ್ರದೇಶ ಸಮಿತಿ ವ್ಯಾಪ್ತಿಯ ಸ್ವಚ್ಛತೆ ಗಣಿ ಕಂಪನಿ ಆಡಳಿತ ಮಾಡಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು
ಜಗನಾಥ ಜೋಷಿ ಅಧಿಸೂಚಿತ ಪ್ರದೇಶ ಸಮಿತಿ ಮುಖ್ಯಾಧಿಕಾರಿ ಹಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.