ಹಟ್ಟಿ ಚಿನ್ನದ ಗಣಿ (ರಾಯಚೂರು): ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಕಂಪೆನಿಯು 2018–19ನೇ ಸಾಲಿನಲ್ಲಿ 1,661 ಕೆಜಿ ಚಿನ್ನವನ್ನು ಉತ್ಪಾದಿಸಿದ್ದು, ನಿಗದಿತ ಗುರಿಯಲ್ಲಿ ಶೇ 98 ರಷ್ಟು ಸಾಧನೆ ಮಾಡಿದೆ ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಪ್ರಭಾಕರ ಸಂಗೂರಮಠ ತಿಳಿಸಿದ್ದಾರೆ.

6 ಲಕ್ಷ ಟನ್ ಅದಿರು ಹೊರತೆಗೆಯುವ ಗುರಿಯಲ್ಲಿ 5.87 ಲಕ್ಷ ಟನ್ ಅದಿರು ಹೊರತೆಗೆಯಲಾಗಿದೆ. ಪ್ರತಿ ಟನ್ ಅದಿರಿನಲ್ಲಿ 2.83 ಗ್ರೇಡ್ ಚಿನ್ನವನ್ನು ಉತ್ಪಾದಿಸುವ ಗುರಿಯನ್ನು ನೂರಕ್ಕೆ ನೂರರಷ್ಟು ಸಾಧನೆ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 1,640 ಕೆಜಿ ಚಿನ್ನ ಉತ್ಪಾದನೆ ಮಾಡಲಾಗಿತ್ತು. ಈ ವರ್ಷ 21 ಕೆಜಿ ಅಧಿಕ ಚಿನ್ನ ಉತ್ಪಾದನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.