ಹಟ್ಟಿ ಪಟ್ಟಣದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ನಡೆಸಲಾಗುವುದು
ಶಿವರಾಜ ಕಂದಗಲ್ ಸಾಮಾಜಿಕ ಹೋರಾಟಗಾರ
ಹಟ್ಟಿ ಆಸ್ಪತ್ರೆಯಲ್ಲಿ ಸೌರ ವಿದ್ಯುತ್ ಯುಪಿಎಸ್ ವ್ಯವಸ್ಧೆ ಇದೆ. ತಾಂತ್ರಿಕ ಕಾರಣದಿಂದ ಘಟನೆ ಜರುಗಿದೆ. ಘಟನೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು
ಅಮರೇಶ ಮಾಕಾಪುರ ತಾಲ್ಲೂಕು ಆರೋಗ್ಯ ಅಧಿಕಾರಿ
ಹಳೆ ವಿಡಿಯೊ ಹರಿಬಿಡುವುದರಿಂದ ವೈದ್ಯರ ನೈತಿಕ ಧೈರ್ಯ ಕುಗ್ಗುತ್ತದೆ. ವಿಡಿಯೊ ಮಾಡಿದವರ ಬಗ್ಗೆ ತನಿಖೆ ನಡೆಸಲಾಗುವುದು. ಇಲಾಖೆಯ ಸಿಬ್ಬಂದಿ ತಪ್ಪಿತಸ್ಧರಾಗಿದ್ದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು
ಡಾ.ಸುರೇದ್ರಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ