ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ಅನಾವರಣ ಮಾಡಿಕೊಳ್ಳುವಷ್ಟು ದೊಡ್ಡವನಲ್ಲ: ನಟ ಸುದೀಪ್

Last Updated 27 ಏಪ್ರಿಲ್ 2022, 11:10 IST
ಅಕ್ಷರ ಗಾತ್ರ

ಸಿರವಾರ (ರಾಯಚೂರು ಜಿಲ್ಲೆ): ’ಒಬ್ಬ ವ್ಯಕ್ತಿಯನ್ನು ದೇವಸ್ಥಾನದಲ್ಲಿ ಕೂರಿಸಬೇಕಾದರೆ ಆ ವ್ಯಕ್ತಿಯು ಅಂತಹ ಸಾಧನೆ ಮಾಡಿರಬೇಕು. ಆದರೆ ನಾನೇನು ಅಂತಹ ಸಾಧನೆ ಮಾಡಿದವನಲ್ಲ, ನಾನು ಕೂಡ ನಿಮ್ಮಂತೆ ಮನುಷ್ಯ, ಇನ್ನೂ ಕಲಿಕೆ ತುಂಬಾ ಇದ್ದು, ನನ್ನ ಪ್ರತಿಮೆ ಅನಾವರಣ ಮಾಡಿಕೊಳ್ಳುವಷ್ಟು ದೊಡ್ಡ ವ್ಯಕ್ತಿ ನಾನಲ್ಲ' ಎಂದು ಚಲನ ಚಿತ್ರನಟ ಸುದೀಪ್ ಹೇಳಿದರು.

ತಾಲ್ಲೂಕಿನ ಕುರುಕುಂದಾ ಗ್ರಾಮದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಮತ್ತು ವೀರ ಮದಕರಿ ನಾಯಕ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ವಾಲ್ಮೀಕಿ ಮತ್ತು ವೀರ ಮದಕರಿ ನಾಯಕ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

‘ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನನ್ನ ಪ್ರತಿಮೆ ಮಾಡಿಸಿದ್ದ ದೇವರಾಜ ನಾಯಕ ಕುರಕುಂದಾ ಅವರ ಕಾರ್ಯ ಮೆಚ್ಚುವಂತಹದು., ಆದರೆ ನನ್ನ ಮಾತಿಗೆ ಸ್ಪಂದಿಸಿ ನನ್ನ ಪ್ರತಿಮೆ ಅನಾವರಣ ಕೈಬಿಟ್ಟಿರುವುದಕ್ಕೆ ಧನ್ಯವಾದಗಳು. ನಿಮ್ಮ ಅಭಿಮಾನಕ್ಕೆ ನಾನು ಚಿರರುಣಿಯಾಗಿದ್ದು,ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕ ಅವರ ಪ್ರತಿಮೆ ಪ್ರತಿಷ್ಠಾಪನೆಗೆ ನಿವೇಶನ ನೀಡಿದ ವ್ಯಕ್ತಿಯ ಅಭಿಮಾನ ದೊಡ್ಡದು‘ ಎಂದರು.

‘ನನ್ನ ಭೇಟಿಗೆಂದು ಬೆಂಗಳೂರಿಗೆ ಬಂದು ಹೊರಗಡೆ ಭೇಟಿಗೆ ಸಿಕ್ಕಿಲ್ಲ ಎಂದು ನಿರಾಶೆಯಾಗಬೇಡಿ. ನೇರವಾಗಿ ನನ್ನ ಮನೆಗೆ ಬನ್ನಿ ಅಭಿಮಾನಿಗಳಿಗೆ ಖಂಡಿತ ಸಿಗುತ್ತೇನೆ. ನನ್ನ ಕೈಲಾದ ಸಹಾಯ ಸಹಕಾರ ನೀಡುತ್ತೇನೆ‘ ಎಂದರು.

‘ವಾಲ್ಮೀಕಿ ಜನಾಂಗದ ಸರ್ವತಾ ಅಭಿವೃದ್ಧಿಗೆ ಬದ್ಧನಾಗಿದ್ದು, ಶೇ.7.5 ಮೀಸಲಾತಿಗಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಾಗಿದ್ದೇನೆ, ಪ್ರಾರಂಭದಿಂದಲೂ ಸ್ವಾಮೀಜಿಗಳ ಸಂಪರ್ಕದಲ್ಲಿದ್ದೇನೆ‘ ಎಂದರು.

ಅಭಿಮಾನಿಗಳಿಗೆ ನಿರಾಶೆ: ಚಿತ್ರನಟ ಸುದೀಪ್ ಅವರನ್ನು ನೋಡಲು ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಯಿಂದಲೂ ಅಭಿಮಾನಿಗಳು ಕುರಕುಂದಾ ಗ್ರಾಮಕ್ಕೆ ಆಗಮಿಸಿದ್ದರು. ಆದರೆ ಆಯೋಜಕರ ಸಮಯದ ಗೊಂದಲದಿಂದಾಗಿ ಅಭಿಮಾನಿಗಳಿಗೆ ಸುದೀಪ್ ಅವರನ್ನು ನೋಡದೇ ಸಾವಿರಾರೂ ಅಭಿಮಾನಿಗಳು ಭಾರಿ ನಿರಾಶೆಯಿಂದ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಾಸ್ ತೆರಳುವಂತಾಯಿತು.

ಆಯೋಜಕರುಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಹಾಗೂ ಸುದೀಪ್ ಅವರಿಂದ ಪುತ್ಥಳಿ ಉದ್ಘಾಟನೆ ಎಂದು ತಿಳಿಸಿದ್ದರು.

ಆದರೆ, ಸುದೀಪ್ ಅವರು ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ಕುರಕುಂದಾ ಗ್ರಾಮಕ್ಕೆ ಬೆಳಗ್ಗೆ 10 ಗಂಟೆಗೆ ಬಂದು ಕೇವಲ 15 ನಿಮಿಷ ಹೆಲಿಪ್ಯಾಡ್ ಸ್ಥಳದಲ್ಲಿಯೇ ಮಾತನಾಡಿ ಅಲ್ಲಿಂದ ಕಾರ್ಯಕ್ರಮ ಸ್ಥಳ ಮತ್ತು ಪುತ್ಥಳಿ ಅನಾವರಣಗೊಳಿಸದೇ ಹೆಲಿಪ್ಯಾಡ್ ಸ್ಥಳದಲ್ಲೆ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಬೆಂಗಳೂರಿಗೆ ವಾಪಾಸಾಗಿದ್ದು, ಅಭಿಮಾನಿಗಳನಿರಾಶೆ ಕಾರಣವಾಯಿತು.

ಅಭಿಮಾನಿಗಳಿಂದ ನೂಕು ನುಗ್ಗಲು: ಸುದೀಪ್ ಅವರ ಬರುವಿಕೆಗೆ ಬೆಳಗ್ಗೆಯಿಂದಲೇ ಕುರಕುಂದಾ ಗ್ರಾಮದಲ್ಲಿ ಸೇರಿದ್ದ ಅಭಿಮಾನಿಗಳು ಹೆಲಿಕಾಪ್ಟರ್ ಸ್ಥಳದಲ್ಲಿ ಬರುತ್ತಿದ್ದಂತೆ ನೂಕುನುಗ್ಗಲು ಉಂಟಾಯಿತು, ಪೊಲೀಸ್ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು.

ಕಾರ್ಯಕ್ರಸ್ಥಳ ಖಾಲಿ: ಕಾರ್ಯಕ್ರಮಮದ ನಡೆಯುವ ಸ್ಥಳದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ದೊಡ್ಡ ಶ್ಯಾಮಿಯಾನ ಹಾಕಿ ಆಸನಗಳನ್ನು ಹಾಕಲಾಗಿತ್ತು, ಆದರೆ ಕಾರ್ಯಕ್ರಮವೇ ನಡೆಯದೇ ಯಾರೂ ಕೂಡ ಬಾರದ ಕಾರಣ ವ್ಯರ್ಥಹಣ ಖರ್ಚು ಮಾಡಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.

ಗ್ರಾಮದ ಮುಖಂಡರಿಂದಲೇ ಪುತ್ಥಳಿ ಅನಾವರಣ: ಪುತ್ಥಳಿ ಅನಾವರಣ ಮಾಡಬೇಕಾಗಿದ್ದ ಚಿತ್ರನಟ ಸುದೀಪ್ ಅವರು ಸ್ಪಲ್ಪ ಸಮಯದಲ್ಲೇ ಬೆಂಗಳೂರಿಗೆ ವಾಪಾಸಾದ ಕಾರಣ ಗ್ರಾಮದ ಮುಖಂಡರೇ ಪುತ್ಥಳಿಗಳನ್ನು ಅನಾವರಣಗೊಳಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT