ಶನಿವಾರ, ಮೇ 21, 2022
23 °C
ಶಂಕರ ಪಾಟೀಲ ಜಿಲ್ಲಾ ಉಸ್ತುವಾರಿ

ರಾಯಚೂರು ಜಿಲ್ಲೆಗೆ ಮೂರು ವರ್ಷಗಳಲ್ಲಿ 6ನೇಯವರಿಗೆ ಉಸ್ತುವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜವಳಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ ಅವರನ್ನು ರಾಯಚೂರು ಜಿಲ್ಲೆಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಸರ್ಕಾರವು ಸೋಮವಾರ  ನೇಮಕಗೊಳಿಸಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೇಲಿಂದ ಮೇಲೆ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಾಗುತ್ತಿದೆ. ಆರಂಭದಲ್ಲಿ ಸಚಿವ ಶ್ರೀರಾಮುಲು ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕಗೊಳಿಸಲಾಗಿತ್ತು. ಕೆಲವೆ ತಿಂಗಳು ಗಳಲ್ಲಿ ಅವರನ್ನು ಬದಲಾವಣೆಗೊಳಿಸಿ ಗೋ ವಿಂದ ಕಾರ ಜೋಳ ಅವರಿಗೆ ತಾತ್ಕಾಲಿ ಕವಾಗಿ ಉಸ್ತು ವಾರಿ ಜವಾಬ್ದಾರಿ ವಹಿಸಲಾಗಿತ್ತು. ಆನಂತರ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಳಿಸಲಾಗಿತ್ತು. ಒಂದು ವರ್ಷಕ್ಕೂ ಹೆಚ್ಚು ಅವಧಿ ಉಸ್ತುವಾರಿ ವಹಿಸಿಕೊಂಡಿದ್ದರು.

ಸಚಿವ ಸಂಪುಟ ಪುನರ್‌ ರಚನೆ ಆಗುತ್ತಿದ್ದಂತೆ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಪ್ರವಾಹ ಮತ್ತು ಕೋವಿಡ್‌ ನಿರ್ವಹಣೆ ಉಸ್ತುವಾರಿ ವಹಿಸಲಾಗಿತ್ತು. ಮೂರು ದಿನಗಳ ಭೇಟಿ ನಿಗದಿ ಮಾಡಿಕೊಂಡು ಬರುತ್ತಿದ್ದ ಸಚಿ ವರು, ಒಂದೇ ದಿನದಲ್ಲಿ ಬೆಂಗ ಳೂರಿಗೆ ಮರಳು ತ್ತಿದ್ದರು. ಇದಕ್ಕಿದ್ದಂತೆ ಅವರ ಉಸ್ತುವಾರಿಯನ್ನು ಬದಲಾವಣೆಗೊಳಿಸಿ ಕೊಪ್ಪಳ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದ ಹಾಲಪ್ಪ ಆಚಾರ್‌ ಅವರಿಗೆ ರಾಯಚೂರು ಜಿಲ್ಲೆಯ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.

ಕಲ್ಯಾಣ ಕರ್ನಾಟಕ ಭಾಗದ ಸಚಿವರೇ ಉಸ್ತುವಾರಿ ಆಗಿದ್ದಕ್ಕೆ ಅಭಿವೃದ್ಧಿ ಕುರಿತು ಸಾಕಷ್ಟು ನಿರೀಕ್ಷೆಗಳು ಜಿಲ್ಲೆಯ ಜನರಲ್ಲಿ ಗರಿಗೆದರಿದ್ದವು. ಆರು ತಿಂಗಳು ಮುಗಿಯುವುದರೊಳಗಾಗಿ ಮತ್ತೆ ಉಸ್ತುವಾರಿ ಸಚಿವರು ಬದಲಾಗಿದ್ದಾರೆ.

ಧಾರವಾಡ ಜಿಲ್ಲೆಯವರಾದ ಸಚಿವ ಶಂಕರ ಬಿ.ಪಾಟೀಲ ಅವರಿಗೆ ರಾಯಚೂರು ಜೊತೆಗೆ ಬೀದರ್‌ ಜಿಲ್ಲೆಯ ಉಸ್ತುವಾರಿಯನ್ನೂ ವಹಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು