ಕವಿತಾಳ: ‘ಮೂಢನಂಬಿಕೆಗಳ ಮೊರೆ ಹೋಗದೆ ಸೂಕ್ತ ಚಿಕಿತ್ಸೆ ಪಡೆದಲ್ಲಿ ಮನೋರೋಗ ಗಳಿಂದ ಗುಣಮುಖರಾಗಲು ಸಾಧ್ಯ’ ಎಂದು ಮನೋರೋಗ ತಜ್ಞ ಡಾ.ಮನೋಹರ ಪತ್ತಾರ ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ ತೋರಣದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮನೋಚೈತನ್ಯ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ʼಮದ್ಯಪಾನ, ಧೂಮಪಾನ ಹಾಗೂ ಮತ್ತಿತರ ದುಶ್ಚಟಗಳಿಂದ ದೂರ ಇರುವುದು, ಒತ್ತಡ ರಹಿತ ಜೀವನ ಶೈಲಿ, ಸದಾ ಒಬ್ಬಂಟಿಯಾಗಿರದೆ ಸ್ನೇಹಿತರ ಜೊತೆ ಕಾಲ ಕಳೆಯುವುದು, ಯೋಗ–ಧ್ಯಾನದ ಮೂಲಕ ಮಾನಸಿಕ ಒತ್ತಡಗಳನ್ನು ನಿಯಂತ್ರಿಸಿದಲ್ಲಿ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಯಾರಿಗೂ ಕೇಳದ ಶಬ್ದ ಕೇಳಿಸಿದಂತೆ ಭಾಸವಾದರೆ ಅದು ಮಾನಸಿಕ ರೋಗದ ಲಕ್ಷಣವಾಗಿದೆ. ಆಪ್ತ ಸಮಾಲೋಚನೆಯ ಮೂಲಕ ತಜ್ಞ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.

ವೈದ್ಯಾಧಿಕಾರಿ ಡಾ.ಪಿ.ಬಿ.ಸಿಂಗ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ, ಆಪ್ತ ಸಮಾಲೋಚನಕಾರರಾದ ಅರುಣ ಕುಲಕರ್ಣಿ, ದೀಪಾ, ಮುಂಜುಳಾ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.