ಜಾಲಹಳ್ಳಿ: ರಾಯಚೂರು ಉಪವಿಭಾಗಾಧಿಕಾರಿ ಗಜಾನನ ಬಾಳೆ ಅವರು ಪಟ್ಟಣದ ವಿವಿಧ ವಾರ್ಡ್ಗಳಿಗೆ ಶುಕ್ರವಾರ ಸಂಜೆ ಭೇಟಿ ನೀಡಿ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.

ದೇವದುರ್ಗ ಹಾಗೂ ಅರಕೇರಾ ತಾಲ್ಲೂಕಿಗೆ ಜಿಲ್ಲಾಮಟ್ಟದ ಕುಡಿಯುವ ನೀರಿನ ನೋಡಲ್ ಅಧಿಕಾರಿಯೂ ಆಗಿರುವ ಗಜಾನನ ಬಾಳೆ ಅವರು, ಬೇಸಿಗೆಯ ಕಾರಣ ಕುಡಿಯುವ ನೀರಿನ ಯೋಜನೆಗಳ ಸ್ಥಿತಿಗತಿಗಳ ಸ್ಥಳ ಪರಿಶೀಲನೆ ಮಾಡಿದರು.

ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ವಿಭಾಗದ ಸಹಾಯಕ ಎಂಜಿನಿಯರ್ ಹೀರಾಲಾಲ್, ಕಿರಿಯ ಎಂಜಿನಿಯರ್ ಜೈಧರ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾ.ಪಂ ಇಒ ಬಸವರಾಜ ಹಟ್ಟಿ, ಪಿಡಿಒ ನರಸಪ್ಪ ಉಪಸ್ಥಿತರಿದ್ದರು.

‘ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 2004–05ನೇ ಸಾಲಿನಲ್ಲಿ ರಾಜೀವ್ಗಾಂಧಿ ಟೆಕ್ನಾಲಜಿ ಅಡಿ ಸುಮಾರು ₹4 ಕೋಟಿ ವೆಚ್ಚದಲ್ಲಿ ಲಿಂಗದಹಳ್ಳಿ ಹತ್ತಿರ ಕೃಷ್ಣಾ ನದಿಯಿಂದ ಜಾಲಹಳ್ಳಿ ಮತ್ತು ಲಿಂಗದಹಳ್ಳಿ ಗ್ರಾಮಗಳಿಗೆ ಶುದ್ಧ ನೀರು ಸರಬರಾಜು ಮಾಡುವ ಘಟಕ ಸ್ಥಾಪಿಸಲಾಗಿತ್ತು. 20 ವರ್ಷ ಕಳೆದರೂ ಜನ ನದಿಯ ನೀರು ಬಳಕೆ ಮಾಡಿಲ್ಲ ಮತ್ತು ಕುಡಿದಿಲ್ಲ. ಆದರೂ ಆ ಘಟಕ ನಿರ್ವಹಣೆಗೆ ಜಿಲ್ಲಾ ಪಂಚಾಯಿತಿಯು ಪ್ರತಿ ವರ್ಷ ಲಕ್ಷಾಂತರ ಹಣ ವೆಚ್ಚ ಮಾಡುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ ನಾಯಕ ಮತ್ತು ಗ್ರಾಮಸ್ಥರು ಆರೋಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.