ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಬಸ್‌ನಲ್ಲಿದ್ದ ಮಹಿಳೆಯ ಸರ ಕಳವು; ಪ್ರಯಾಣಿಕರ ಬ್ಯಾಗ್‌ ತಪಾಸಣೆ

Published 24 ಫೆಬ್ರುವರಿ 2024, 14:09 IST
Last Updated 24 ಫೆಬ್ರುವರಿ 2024, 14:09 IST
ಅಕ್ಷರ ಗಾತ್ರ

ಜಾಲಹಳ್ಳಿ: ದೇವದುರ್ಗ ತಾಲ್ಲೂಕಿನ ಮಹಿಳೆಯೊಬ್ಬರು ಶನಿವಾರ ಬೆಳಿಗ್ಗೆ ಬಳ್ಳಾರಿಯಿಂದ ತಿಂಥಣಿ ಬ್ರಿಜ್ ಮೂಲಕ ದೇವದುರ್ಗಕ್ಕೆ ಬರುತ್ತಿರುವ ಸಮಯದಲ್ಲಿ ಬ್ಯಾಗ್‌ನಲ್ಲಿಟ್ಟಿದ್ದ 50 ಗ್ರಾಂ ಚಿನ್ನದ ಎರಡು ಸರಗಳನ್ನು ಕಳವು ಮಾಡಲಾಗಿದೆ.

ಬೆಳಿಗ್ಗೆ 10.30ಕ್ಕೆ ತಿಂಥಣಿ ಬ್ರಿಜ್‌ನಿಂದ ದೇವದುರ್ಗಕ್ಕೆ ಬರುವಾಗ ಬಸ್‌ ಹತ್ತುವ ಸಂದರ್ಭದಲ್ಲಿ ಕಳ್ಳರು ಕಳವು ಮಾಡಿದ್ದಾರೆ. ತಕ್ಷಣವೇ ಎಚ್ಚೆತ್ತ ಮಹಿಳೆ ಪತಿಗೆ ವಿಷಯ ತಿಳಿಸಿದ್ದಾರೆ. ಬಸ್‌ನಲ್ಲಿರುವ ಪ್ರಯಾಣಿಕರನ್ನು ವಿಚಾರಿಸಿದರೂ ಪ್ರಯೋಜನವಾಗಿಲ್ಲ.

ನಂತರ ಜಾಲಹಳ್ಳಿ ಪಟ್ಟಣದ ಪೊಲೀಸ್‌ ಠಾಣೆಗೆ ಬಸ್‌ ಕರೆತಂದು ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರ ಬ್ಯಾಗ್‌ಗಳನ್ನು ಪರಿಶೀಲಿಸಿದರೂ ಚಿನ್ನದ ಸರಗಳು ಸಿಕ್ಕಿಲ್ಲ. ಈ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

‘ತಿಂಥಣಿ ಬ್ರಿಜ್ ದೇವದುರ್ಗ ತಾಲ್ಲೂಕಿಗೆ ಸೇರಿದ್ದು, ಲಿಂಗಸೂಗೂರು, ಸುರಪುರ, ದೇವದುರ್ಗ ತಾಲ್ಲೂಕುಗಳ ಸಂಪರ್ಕ ಕಲ್ಪಿಸುವ ಕೇಂದ್ರ. ಇಲ್ಲಿ ನಿತ್ಯ ಒಂದಿಲ್ಲ ವಸ್ತುಗಳ ಕಳವು ನಡೆಯುತ್ತದೆ. ಆದರೆ, ಕೆಲವರು ಮಾತ್ರ ದೂರು ನೀಡುತ್ತಾರೆ’ ಎಂದು ಆರೋಪ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT