ರಾಯಚೂರು: ‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಜೂನ್ 27 ರಂದು ದೇವದುರ್ಗಕ್ಕೆ ಆಗಮಿಸಲಿದ್ದು, ಚಿಕ್ಕ ಹೊನ್ನಕುಣಿ ಬಳಿ ನಿರ್ಮಿಸಲಾಗಿರುವ ದೇವೇಗೌಡರ ಪುತ್ಥಳಿ ಅನಾವರಣ ಹಾಗೂ ದೇವದುರ್ಗದ ಬಸವೇಶ್ವರ ಮೈದಾನದಲ್ಲಿ ಆಯೋಜಿಸಿರುವ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ವಿರೂಪಾಕ್ಷಿ ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ 58 ದಿನ 110 ವಿಧಾನಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಆಯೋಜಿಸಿದೆ. ಜೂನ್ 26 ರಂದು ನಿಖಿಲ್ ಕುಮಾರಸ್ವಾಮಿ ಸಿಂಧನೂರು ನಗರಕ್ಕೆ ಹಾಗೂ ಮಧ್ಯಾಹ್ನ ಮಾನ್ವಿ ಪಟ್ಟಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 27 ರಂದು ದೇವದುರ್ಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ದೇವದುರ್ಗ ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆ ಅಪಾರ ಇದೆ. ಮಲ್ಲಣ್ಣ ನಾಗರಾಳ ಅವರು ದೇವೇಗೌಡ ಪುತ್ಥಳಿ ನಿರ್ಮಾಣ ಮಾಡಿಸಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಕರೆಮ್ಮ ನಾಯಕ, ಮಹಾಂತೇಶ ಪಾಟೀಲ ಅತ್ತನೂರು, ಎನ್.ಶಿವಶಂಕರ, ಮಲ್ಲಣ್ಣ ನಾಗರಾಳ, ಸಿದ್ದಣ್ಣ ತಾತ, ಸಿದ್ದನಗೌಡ ಮೂಡಲಗುಂಡಾ, ಲಕ್ಷ್ಮೀಪತಿ ಗಾಣಧಾಳ, ನರಸಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.