ಶನಿವಾರ, ಮಾರ್ಚ್ 25, 2023
30 °C

ಪ್ರತಿಯೊಬ್ಬರೂ ಕನ್ನಡದ ಉಳಿವಿಗೆ ಶ್ರಮಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಕ್ತಿನಗರ: ‘ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಶಕ್ತಿನಗರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಿಜಯಕುಮಾರ ಗಣಾಚಾರಿ ಹೇಳಿದರು.

ಶಕ್ತಿನಗರ ಕನ್ನಡ ಕ್ರಿಯಾ ಸಮಿತಿ ಕಚೇರಿ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವದ ‍ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡಿಗರಾದ ನಾವು ಅನ್ಯ ಭಾಷೆಗಳ ಪ್ರಭಾವಕ್ಕೊಳಗಾಗಿ ಕನ್ನಡ ಬಳಸುವುದನ್ನು ಕಡಿಮೆ ಮಾಡುತ್ತಿದ್ದೇವೆ. ಕನ್ನಡ ಭಾಷೆಯ ಏಳಿಗೆ ಹಾಗೂ ಉಳಿವಿಗಾಗಿ ಶ್ರಮಿಸುವ ಅಗತ್ಯವಿದೆ ಎಂದರು.

ಶಕ್ತಿನಗರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ತತ್ವಪದ ಕಲಾವಿದ ಸೂಗಪ್ಪ ಗುಡೇಬಲ್ಲೂರ, ಹವ್ಯಾಸಿ ರಂಗ ಕಲಾವಿದ ಅಣ್ಣವೀರಯ್ಯಾ ಸ್ವಾಮಿ, ಕುಮಾರ್. ವಚನ ಕಂಠಪಾಠ, ವಿಜಯ್ ಇಂಗಳಗಿ, ಚಿತ್ರ ಕಲಾವಿದ ಮಲ್ಲಿಕಾರ್ಜುನ ವಿಭೂತಿ, ಬರಹಗಾರ ಮಂಜುನಾಥ ಗುತ್ತೇದಾರ ಅವರನ್ನು ಸನ್ಮಾನಿಸಲಾಯಿತು.

ಆಂಜನೇಯ ಜಾಲಿಬೆಂಚಿ, ಅಮರೇಗೌಡ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಹೇಶಸ್ವಾಮಿ ನಿರೂಪಿಸಿದರು.

ಕನ್ನಡ ಕ್ರಿಯಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಬಶೀರ್ ಅಹ್ಮದ್, ಗೌರವಾಧ್ಯಕ್ಷ ಎಸ್.ಎಸ್.ಮ್ಯಾದಾರ್, ಶಕ್ತಿನಗರ ಕನ್ನಡ ಕ್ರಿಯಾ ಸಮಿತಿ ಗೌರವಾಧ್ಯಕ್ಷ ಶಿವಶರಣಯ್ಯ ಸ್ವಾಮಿ, ಉಪಾಧ್ಯಕ್ಷ ಸಂತೋಷ್ ಯಾದವಾಡ , ಬಿ.ಸುಜಯ್, ಸಹ ಕಾರ್ಯದರ್ಶಿ ಗುರುರಾಜ್ ಅಂಬಿಗೇರ, ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಅರುಣ್ ಕುಮಾರ್‌, ಅಮರಪ್ಪ ಗೌಡ, ಮಹೇಶ್ ಪೊಲೀಸ್ ಪಾಟೀಲ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.