ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ಸಂಭ್ರಮದಿಂದ ಶಾಲೆಗೆ ಆಗಮಿಸಿದ ಮಕ್ಕಳು

Published 31 ಮೇ 2024, 13:15 IST
Last Updated 31 ಮೇ 2024, 13:15 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ ವಿವಿಧ ಶಾಲೆಗಳು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶುಕ್ರವಾರ ಶಾಲೆಗಳು ಪುನರ್‌ ಆರಂಭವಾಗಿದ್ದು ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದರೂ ಸಂಭ್ರಮದಿಂದ ಆಗಮಿಸಿದ್ದು ಕಂಡುಬಂತು.

ಇಲ್ಲಿನ ಉನ್ನತೀಕರಿಸಿದ ಕನ್ಯಾ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಿಸಲಾಯಿತು. ಮುಖ್ಯ ಶಿಕ್ಷಕ ರುದ್ರಪ್ಪ ಲೋಕಾಪುರ, ಶಿಕ್ಷಕರಾದ ಬಸವರಾಜ ಪಲಕನಮರಡಿ, ಶರಣಮ್ಮ, ಸಂಗಮ್ಮ, ಭಾರತಿ, ಪ್ರೀತಿ ಉಪಸ್ಥಿತರಿದ್ದರು.

ಸಮೀಪದ ವಟಗಲ್‌ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಯಲ್ಲಿ ತಳಿರು, ತೋರಣ ಕಟ್ಟಿ ಅಲಂಕರಿಸಲಾಗಿತ್ತು ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಲಾಯಿತು, 5, 6, 7 ಮತ್ತು 8ನೇ ತರಗತಿ ಬಾಲಕಿಯರಿಗೆ ಈ ಬಾರಿ ಚೂಡಿದಾರ್‌ ವಿತರಣೆ ವಿಶೇಷವಾಗಿತ್ತು. ಮುಖ್ಯ ಶಿಕ್ಷಕಿ ಪುಷ್ಪಾ ಪತ್ತಾರ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ಹಿರೇದಿನ್ನಿ ಮತ್ತು ಹಿರೇಬಾದರದಿನ್ನಿ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು. ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಮದ್ಯಾಹ್ನ ಸಿರಾ, ಅನ್ನ ಸಾಂಬಾರು ಊಟ ನೀಡಲಾಯಿತು.

ಕವಿತಾಳ ಸಮೀಪದ ಹಿರೇದಿನ್ನಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಯಿತು
ಕವಿತಾಳ ಸಮೀಪದ ಹಿರೇದಿನ್ನಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಯಿತು
ಕವಿತಾಳ ಸಮೀಪದ ವಟಗಲ್‌ ಸರ್ಕಾರಿ ಗ್ರಾಮದ ಶಾಲೆಯಲ್ಲಿ ಶಿಕ್ಷಕರು ಎಸ್‌ಡಿಎಂಸಿ ಸದಸ್ಯರು ಮಕ್ಕಳನ್ನು ಸ್ವಾಗತಿಸಿದರು
ಕವಿತಾಳ ಸಮೀಪದ ವಟಗಲ್‌ ಸರ್ಕಾರಿ ಗ್ರಾಮದ ಶಾಲೆಯಲ್ಲಿ ಶಿಕ್ಷಕರು ಎಸ್‌ಡಿಎಂಸಿ ಸದಸ್ಯರು ಮಕ್ಕಳನ್ನು ಸ್ವಾಗತಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT