ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ತುಂಬಿರುವ ಹರಳುಗಳು
ದೇವದುರ್ಗ ಪಟ್ಟಣದ ಕೊಪ್ಪರ ಕ್ರಾಸ್ ಹತ್ತಿರ ಇರುವ ತಾಲ್ಲೂಕು ಕ್ರೀಡಾಂಗಣ
ಮಾನ್ವಿಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಪ್ರೇಕ್ಷಕರ ಗ್ಯಾಲರಿ
ಸಿರವಾರ ತಾಲ್ಲೂಕು ಕ್ರೀಡಾಂಗಣದ ಜಾಗದಲ್ಲಿ ಎಸೆಯಲಾದ ಕಸ
ಲಿಂಗಸುಗೂರು ತಾಲ್ಲೂಕು ಕ್ರೀಡಾಂಗಣದ ಹೊರನೋಟ
ಕ್ರೀಡಾಂಗಣ ಇಲ್ಲದ ಮಸ್ಕಿ ತಾಲ್ಲೂಕು
ಮಸ್ಕಿ: ನೂತನ ತಾಲ್ಲೂಕು ಕೇಂದ್ರ ಸ್ಥಾನವಾದ ಮಸ್ಕಿ ಪಟ್ಟಣದಲ್ಲಿ ತಾಲ್ಲೂಕು ಕ್ರೀಡಾಂಗಣ ಇಲ್ಲದೇ ಕ್ರೀಡಾಪಟುಗಳು ಪರದಾಡಬೇಕಾದ ಪರಿಸ್ಥಿತಿ ಬಂದಿದೆ. ಕ್ರೀಡಾಂಗಣ ನಿರ್ಮಿಸುವಂತೆ ಹತ್ತು ವರ್ಷಗಳಿಂದ ಕ್ರೀಡಾಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಇಂದಿಗೂ ಸ್ಪಂದನೆ ದೊರೆತಿಲ್ಲ. ತಾಲ್ಲೂಕು ಕ್ರೀಡಾಂಗಣ ಇಲ್ಲದ ಕಾರಣ ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಬಯಲು ಜಾಗದಲ್ಲಿಯೇ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಕವಿತಾಳ ರಸ್ತೆಯಲ್ಲಿ ನೀರಾವರಿ ಇಲಾಖೆಗೆ ಸೇರಿದ ಹತ್ತು ಎಕರೆ ಜಾಗವನ್ನು ಶಾಸಕ ಆರ್. ಬಸನಗೌಡ ತುರ್ವಿಹಾಳ ಪರಿಶೀಲನೆ ಮಾಡಿದ್ದರು. ಆದರೆ ಮುಂದಿನ ಪ್ರಕ್ರಿಯೆ ನಡೆಯಲೇ ಇಲ್ಲ. ಶಾಸಕರು ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಆಸಕ್ತಿ ತೋರಿಸಬೇಕು. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎನ್ನವುದು ಕ್ರೀಡಾಪಟುಗಳ ಆಗ್ರಹ.
ಸಿಂಧನೂರಲ್ಲಿ ಮಾದರಿ ಕ್ರೀಡಾಂಗಣ
ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ₹ 5 ಕೋಟಿ ವೆಚ್ಚದಲ್ಲಿ ಮಾದರಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಕ್ರೀಡಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಕ್ರೀಡಾಂಗಣದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಜಿಮ್ ವ್ಯವಸ್ಥೆ ರೋಲರ್ ಪಿಚ್‍ರೋಲರ್ ಗ್ರಾಸ್ ಕಟ್ಟಿಂಗ್ ಮಷಿನ್ ಇದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಆಸನ ಹಾಗೂ ಪೀಠೋಪಕರಣಕ್ಕೆ ಸರ್ಕಾರ ₹ 2 ಕೋಟಿ ಬಿಡುಗಡೆ ಮಾಡಿದೆ. ಬಾಕಿ ಕಾಮಗಾರಿಗಳು ನಡೆಯಬೇಕಿದೆ. ‘ಪ್ರಮುಖರು ಸಮಿತಿ ರಚಿಸಿಕೊಂಡು ತಲಾ ₹50 ಪ್ರತಿ ತಿಂಗಳು ವಂತಿಗೆ ಸಂಗ್ರಹಿಸುವ ಮೂಲಕ ಉತ್ತಮ ನಿರ್ವಹಣೆ ಮಾಡಬಹುದು’ ಎಂದು ಕ್ರೀಡಾ ಪ್ರೇಮಿ ವೆಂಕಟರಾವ್ ನಾಡಗೌಡ ಹೇಳುತ್ತಾರೆ.