ರಾಯಚೂರು: ನವೋದಯ ನರ್ಸಿಂಗ್ ಕಾಲೇಜಿನ 33ನೇ ತಂಡದ ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿ (ಜಿಎನ್ಎಂ) ಹಾಗೂ 32ನೇ ತಂಡದ ಬೇಸಿಕ್ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪದಾನ ಸಮಾರಂಭ ಡಾ.ಹೆಗ್ಡೆ ಸಿಲ್ವರ್ಜುಬ್ಲಿ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಮುಖ್ಯ ಅತಿಥಿಯಾಗಿ ನವೋದಯ ಎಜುಕೇಶನ್ ಟ್ರಸ್ಟ್ ಗೌರವಾಧ್ಯಕ್ಷ ಎಸ್.ಆರ್.ರೆಡ್ಡಿ, ಕರ್ನಾಟಕ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೆಂಗಳೂರಿನ ನರ್ಸಿಂಗ್ ಡೀನ್ ಡಾ. ಮಹೇಶ ಪಿ. ಭಾಗವಹಿಸಿದ್ದರು.

ಡಾ.ಮಹೇಶ ವಿದ್ಯಾರ್ಥಿನಿಯರಿಗೆ ದೀಪ ಹಸ್ತಾಂತರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ.ಹೆಟ್ಸಿ ಸುಥಾನ ಕುಮಾರಿ ಪ್ರತಿಜ್ಞಾವಿಧಿ ಬೋಧಿಸಿದರು.

ಟ್ರಸ್ಟ್ ರಿಜಿಸ್ಟ್ರಾರ್ ಡಾ.ಟಿ. ಶ್ರೀನಿವಾಸ್, ನವೋದಯ ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ.ದೇವಾನಂದ, ನವೋದಯ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅರುಣ್ ಕೆ.ನಾಯಕ ಉಪಸ್ಥಿತರಿದ್ದರು.

ಪ್ರೊ.ಇಮಾನ್ಯುವೆಲ್ ಪಿ. ಸ್ವಾಗತಿಸಿದರು. ನವೋದಯ ನರ್ಸಿಂಗ್ ಕಾಲೇಜಿನ ಪ್ರೊ.ರಾಖಿ ಸರಕಾರ ಹಾಗೂ ಪ್ರೊ.ತಬಿತ ರವೀಶ್ ನಿರೂಪಿಸಿದರು. ಪ್ರೊ.ಪೈಲಟ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.