ಹಟ್ಟಿ ಚಿನ್ನದ ಗಣಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹೊಂದಿರುವ ಜಾಗ ವಿವಾದದಲ್ಲಿದೆ. ಪ್ರಕರಣ ಕೋರ್ಟ್ನಲ್ಲಿ ಇರುವುದರಿಂದ ಕೇಂದ್ರದ ಕಟ್ಟಡ ಕಾಮಗಾರಿ ಕೆಲಸಕ್ಕೆ ಕಾನೂನು ತೊಡಕು ಆಗಿದೆ.

ಪ್ರಾಥಮಿಕ ಆರೋಗ್ಯಕೇಂದ್ರವನ್ನು ಸಮುದಾಯ ಆರೋಗ್ಯಕೇಂದ್ರವಾಗಿ ಸರ್ಕಾರ ಮೇಲ್ದರ್ಜೆಗೇರಿ ಆದೇಶಿಸಿ ಕಟ್ಟಡ ಕಟ್ಟಲು ಅನುದಾನ ನೀಡಿದೆ. ಟೆಂಡರ್ ಹಂತದಲ್ಲಿ ಕೇಂದ್ರಕ್ಕೆ ಭೂಮಿ ದಾನ ಮಾಡಿದವರ ಮಾಲೀಕತ್ವದ ವಿಷಯ ನ್ಯಾಯಾಲಯದ ಇರುವುದರಿಂದ ಹೊಸ ಕಟ್ಟಡ ಕಟ್ಟಲು ಸಾಧ್ಯವಾಗುತ್ತಿಲ್ಲ.

ಕಟ್ಟಡ ಕಟ್ಟುವ ಸಂದರ್ಭದಲ್ಲಿ ಶಂಕರಗೌಡ ಬಳಗಾನೂರು ಹಾಗೂ ಮಹ್ಮದ್ ಶಾಲಂಸಾಬ್ ಎನ್ನುವವರು ತಲಾ ಒಂದೊಂದು ಎಕರೆ ಭೂಮಿ ದಾನ ಮಾಡಿದ್ದಾರೆ. ಈ ಪೈಕಿ ಮಹ್ಮದ್ ಶಾಲಂಸಾಬ್ ದಾನ ಮಾಡಿದ ಭೂಮಿಯ ಮಾಲೀಕತ್ವದ ವಿವಾದ ನ್ಯಾಯಾಲಯದಲ್ಲಿದೆ.

ತಲುಪದ ಕೇಂದ್ರದ ಲಾಭ: ಜಾಗದ ವಿವಾದ ಬಗೆಹರಿಯುವವರೆಗೆ ಸಮುದಾಯ ಆರೋಗ್ಯ ಕೇಂದ್ರದ, ಕಟ್ಟಡ ಕಟ್ಟಲು ಸಾಧ್ಯವಿಲ್ಲದಂತಾಗಿದೆ. ಪಟ್ಟಣಕ್ಕೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾದರೂ ಜಾಗದ ವಿವಾದದಿಂದಾಗಿ ಜನರಿಗೆ ತಲುಪದಂತಾಗಿದೆ. ಪಟ್ಟಣದ ನಾನಾ ಸಂಘಟನೆಗಳವರು, ಸಮುದಾಯ ಆರೋಗ್ಯಕೇಂದ್ರಕ್ಕಾಗಿ ಹಲವು ತಿಂಗಳಿಂದ ಹೋರಾಟದ ಪ್ರಯತ್ನ ನಡೆಸಿದರ ಫಲವಾಗಿ ಹೊಸ ಕಟ್ಟಡದೊಂದಿಗೆ ಸಮುದಾಯ ಆರೋಗ್ಯಕೇಂದ್ರ ಘೋಷಣೆಯಾದರೂ ಸ್ಥಳಾವಕಾಶದ ಕೊರತೆಯಿಂದ ಸೇವೆ ಸಿಗದಂತಾಗಿದೆ ಇಲ್ಲಿನ ಜನರಿಗೆ.

ಜಾಗದ ವಿಷಯ ಕೋರ್ಟ್ನಲ್ಲಿರುವುದು ತಾಲ್ಲೂಕು ಆರೋಗ್ಯಾಧಿಕಾರಿಗಳ ವರದಿಯಿಂದ ಗೊತ್ತಾಗಿದೆ. ಸ್ಧಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು
ಸುರೇಂದ್ರ ಬಾಬು ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿ ರಾಯಚೂರು

ಅಧಿಕಾರಿಗಳು ವಿವಾದದ ಬಗ್ಗೆ ಗಮನಹರಿಸಿ ಸಮುದಾಯ ಆರೋಗ್ಯ ಕೇಂದ್ರ ಸ್ಧಾಪನೆ ಮಾಡಲು ಮುಂದಾಬೇಕು
ವಿನೋದಕುಮಾರ ಅಧ್ಯಕ್ಷ ಹಿಂದೂ ದಲಿತ ಸೇನೆ ಹಟ್ಟಿ ಘಟಕ

ಹಟ್ಟಿ ಪಟ್ಟಣಕ್ಕೆ ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಮುಖಂಡರು ವಿಫಲರಾಗಿದ್ದಾರೆ. ಸಂಬಂದಪಟ್ಟ ಇಲಾಖೆ ಇತ್ತ ಕಡೆ ಗಮನಹರಿಸಲಿ
ಸುರೇಶಗೌಡ ಗುರಿಕಾರ ಅಧ್ಯಕ್ಷ ಹಟ್ಟಿ ನಾಗರಿಕ ಸಮಿತಿ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.