ಲಿಂಗಸುಗೂರು: ದಸರಾ ಅಂಗವಾಗಿ ಛಾವಣಿ ದಸರಾ ಸಮಿತಿ ಗುರುವಾರ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಿದ್ದ ದಾಂಡಿಯಾ ನೃತ್ಯ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿತು.

ನವರಾತ್ರಿ ಅಂಗವಾಗಿ ಛಾವಣಿ ದಸರಾ ಸಮಿತಿ ಪ್ರತಿವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಈ ವರ್ಷ ಗುಜರಾತ್ನ ಸಾಂಪ್ರದಾಯಿಕ ಜಾನಪದ ನೃತ್ಯವಾದ ದಾಂಡಿಯಾ ನೃತ್ಯವನ್ನು ಪಟ್ಟಣಕ್ಕೆ ಪ್ರಥಮ ಭಾರಿಗೆ ಪರಿಚಯಿಸುವ ಕೆಲಸ ಮಾಡಿದೆ.

ಗುರುವಾರ ಸಂಜೆ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ದಾಂಡಿಯಾ ಉತ್ಸವದಲ್ಲಿ ಪಟ್ಟಣದ ಮಹಿಳೆಯರು, ಮಕ್ಕಳು ದಾಂಡಿಯಾ ನೃತ್ಯ ಮಾಡಿ ಸಂಭ್ರಮಪಟ್ಟರು.

‘ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ದಸರಾ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ದಾಂಡಿಯಾ ಉತ್ಸವ ಆಯೋಜನೆ ಮಾಡಿದ್ದೇವೆ’ ಎಂದು ಛಾವಣಿ ದಸರಾ ಸಮಿತಿ ಮುಖಂಡ ಮಂಜುನಾಥ ಕಾಮಿನ್ ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷೆ ಸುನೀತಾ ಕೆಂಭಾವಿ, ರಶ್ಮಿ ಸಿಂಗ್, ರಂಜನಾ ಸಿಂಗ್, ನಿಲಮ್ ರಾಠಿ, ಸುಹಾಸಿನಿ ಶ್ರೀವಾಸ್ತವ್, ಉಮಾ ಖಂಡೇಲವಾಲ, ರೇಖಾ ಬಾಯಿ ಠಾಕೂರ್, ಜ್ಯೋತಿ ಸಿಂಗ್ ಹಜಾರೆ, ವರ್ಷ ಸಾಹುಕಾರ, ಲಕ್ಷ್ಮೀಬಾಯಿ, ಕಸ್ತೂರಿ ಬಾಯಿ, ಅಶ್ವಿನಿ ಕೆಂಭಾವಿ, ರಮಾ ಮುನ್ನೂರ, ಭೂಮಿಕಾ, ಐಶ್ವರ್ಯ, ರಿತಿಕಾ, ನಂದಿತಾ, ಅನ್ಸಿಕಾ, ಅಪೂರ್ವ ಹಾಗೂ ಶ್ರಾವ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.