‘ಲೇ ತೆಪರ, ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ...’ ಇದೇ ತರ ಇನ್ನೊಂದು ಹೇಳಲೆ ನೋಡಾಣ’ ಹರಟೆಕಟ್ಟೆಯಲ್ಲಿ ದುಬ್ಬೀರ ಸವಾಲು ಹಾಕಿದ.

‘ಅಷ್ಟೇನಾ? ‘ಗುಂಡಿ ರಸ್ತೆಯೊಳಗೋ ರಸ್ತೆಯೇ ಗುಂಡಿಯೊಳಗೋ... ಹೆಂಗೆ?’ ಎಂದ ತೆಪರೇಸಿ.

‘ನಂದೂ ಒಂದು..., ‘ಬುರುಡೆ ಟೀವಿಯೊಳಗೋ ಟೀವಿಯೇ ಬುರುಡೆಯೊಳಗೋ...’ ಗುಡ್ಡೆ ಸೇರಿಸಿದ.

‘ವಾವ್ವಾ... ನಿಮ್ಗೂ ತೆಲಿ ಐತಿ ಬಿಡ್ರಪ, ಏನೇ ಆಗ್ಲಿ ಈ ಕೈ ಸರ್ಕಾರದಲ್ಲಿ ಗುಂಡಿಗಳದ್ದೇ ಕಾರುಬಾರು...’ ಎಂದು ಮಂಜಮ್ಮ ಜೋರಾಗಿ ನಕ್ಕಳು.

‘ಹಲೋ... ಅವೆಲ್ಲ ನಿಮ್ ಕಮಲ ಸರ್ಕಾರ ಇದ್ದಾಗ ಆದ ಗುಂಡಿಗಳು, ಸ್ವಲ್ಪ ತಿಳ್ಕಂಡು ಮಾತಾಡು’ ಎಂದ ಗುಡ್ಡೆ.

‘ನಮ್ ಸರ್ಕಾರದ ಗುಂಡಿಗಳಾದ್ರೆ? ನಿಮ್ ಸರ್ಕಾರ ಮುಚ್ಚಬಾರ್ದು ಅಂತಿದೆಯಾ? ಮೊನ್ನೆ ಶುಭಾಂಶು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ನಲ್ಲ, ಅಲ್ಲಿಂದ ಬಗ್ಗಿ ಭೂಮಿ ನೋಡಿದ್ನಂತೆ. ಬೆಂಗಳೂರು ಎಲ್ಲಿದೆ ಅಂತ ಜತೆಗಿದ್ದೋರು ಕೇಳಿದಾಗ ಅಲ್ಲಿ ಬರೀ ಗುಂಡಿ ಕಾಣ್ತದಾವಲ್ಲ, ಅದೇ ಬೆಂಗಳೂರು ಅಂದ್ನಂತೆ ಗೊತ್ತಾ?’ ಎಂದು ಮಂಜಮ್ಮ ತಿರುಗೇಟು ನೀಡಿದಳು.

‘ನಿಮ್ ನಮೋ ಸಾಹೇಬ್ರ ಮನೆ ಮುಂದೂ ಗುಂಡಿಗಳದಾವಂತೆ, ನಮ್ ಡಿಕೆಶಿ ಸಾಹೇಬ್ರು ಹೋಗಿ ನೋಡ್ಕಂಡ್ ಬಂದಿದಾರೆ, ಅದು ಗೊತ್ತಾ
ನಿನಗೆ?’ ಗುಡ್ಡೆಯೂ ಹಟ ಬಿಡಲಿಲ್ಲ.

‘ಈಗ ನಿಮ್ ಕೈ ಸರ್ಕಾರದಲ್ಲಿ ಗುಂಡಿ ತೋಡೋರು ಬಾಳ ಜನ ಆಗಿದಾರೆ, ಯಾರು ಯಾವ ಗುಂಡಿಗೆ ಬೀಳ್ತಾರೋ ನೋಡ್ತಿರು...’ ಮಂಜಮ್ಮ ಗರಂ ಆದಳು.

‘ಏಯ್, ಈಗ ಇಬ್ರೂ ಸುಮ್ನಿರ್ತೀರೋ ಇಲ್ಲೋ? ಹಂಗೆ ನೋಡಿದ್ರೆ ಆಕಾಶದ ಚಂದ್ರನ ಮ್ಯಾಲೂ ಗುಂಡಿ ಅದಾವಂತೆ, ಅವನ್ನ ಮುಚ್ಚೋರ್ಯಾರು? ಈಗ ಆ ಟಾಪಿಕ್ ಬ್ಯಾಡ, ಲೇ ತೆಪರ, ಜಾತಿ ಸಮೀಕ್ಷೇಲಿ ವೈವಾಹಿಕ ಸ್ಥಾನಮಾನ ಅಂತ ಒಂದು ಕಾಲಂ ಇದೆಯಂತೆ, ನೀನು ಏನು ತುಂಬಿದೆ?’ ದುಬ್ಬೀರ ಮಾತು ಬದಲಿಸಿದ.

‘ವೈವಾಹಿಕ ಸ್ಥಾನಮಾನನ? ಸ್ಥಾನ ಇದೆ, ಮಾನ ಇಲ್ಲ ಅಂತ ತೆಪರ ತುಂಬಿರ್ತಾನೆ ಅಷ್ಟೆ...’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.