ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು|ಸಿಡಿಲು ಬಡಿದು ಸಾವು: ಕುಟುಂಬಕ್ಕೆ ₹5ಲಕ್ಷ ಪರಿಹಾರ

Published 4 ಜೂನ್ 2023, 16:25 IST
Last Updated 4 ಜೂನ್ 2023, 16:25 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಸಿಡಿಲು ಬಡಿದು ಈಚೆಗೆ ಮೃತಪಟ್ಟ ನೂರಅಹ್ಮದ ಬೆಂಡೋಣಿ ಕುಟುಂಬಕ್ಕೆ ₹ 5ಲಕ್ಷ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ತಲಾ ₹5ಲಕ್ಷ ಪರಿಹಾರ ಚೆಕ್‍ ವಿತರಿಸಿದ್ದು ಕುಟುಂಬಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಚಿವ ಎನ್.ಎಸ್‍ ಬೋಸರಾಜು ಹೇಳಿದರು.

ಭಾನುವಾರ ಬೆಂಡೋಣಿ ಗ್ರಾಮದ ನೂರಅಹ್ಮದ ಮನೆಗೆ ಭೇಟಿ ನೀಡಿ ಮೃತರ ತಂದೆ, ತಾಯಿ ಮತ್ತು ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಪರಿಹಾರ ಚಿಕ್‍ ವಿತರಿಸಿ ಮಾತನಾಡಿ, ‘ಪ್ರಕೃತಿಯ ಅವಘಡದಿಂದ ಸಾವು ಸಂಭವಿಸಿದೆ. ವಯಸ್ಸಿಗೆ ಬಂದ ಮಗ ಮೃತಪಟ್ಟಿರುವುದು ತಮಗೂ ನೋವುಂಟು ಮಾಡಿದೆ. ತಾವುಗಳೆಲ್ಲ ಆತ್ಮಸ್ಥೈರ್ಯ ತಂದುಕೊಂಡು ಭವಿಷ್ಯದ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.

ಈ ಮುಂಚೆ ವಾಂತಿ ಭೇದಿ ಪ್ರಕರಣದಿಂದ ತತ್ತರಗೊಂಡ ಯರಗುಂಟಿ ಮತ್ತು ಗೊರೆಬಾಳ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಗತಿ ಪರಿಶೀಲನೆ ನಡೆಸಿದರು. ಶುದ್ಧ ಕುಡಿವ ನೀರು ಪೂರೈಕೆ, ಸ್ವಚ್ಛತೆಗೆ ನೀಡಿರುವ ಮಹತ್ವ, ಆರೋಗ್ಯ ಇಲಾಖೆ ತಕ್ಷಣಕ್ಕೆ ಸ್ಪಂದಿಸಿ ಚಿಕಿತ್ಸೆ ನೀಡಿರುವ ಕುರಿತಂತೆ ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜನರ ಆರೋಗ್ಯ ರಕ್ಷಣೆ ವಿಷಯದಲ್ಲಿ ಹಾರಿಕೆ ಉತ್ತರ ನೀಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಯರಗುಂಟಿ ಶಾಲೆಯ ತಾತ್ಕಾಲಿಕ ಆರೋಗ್ಯ ಸೇವಾ ಕೇಂದ್ರದಲ್ಲಿನ ರೋಗಿಗಳ ಆರೋಗ್ಯ ವಿಚಾರಣೆ ನಡೆಸಿದರು. ಜನತೆ ಕೂಡ ಆರೋಗ್ಯ ಇಲಾಖೆ ನೀಡಿರುವ ಮುಂಜಾಗ್ರತ ಕ್ರಮಗಳನ್ನು ಪಾಲಿಸಬೇಕು. ಆಡಳಿತ ಆಗಿರುವ ಪ್ರಮಾದಗಳನ್ನು ಸರಿಪಡಿಸಿ ಶುದ್ಧ ಕುಡಿವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಕೂಡ ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

ಸಚಿವರಿಗೆ ಶಾಸಕ ಪಂಪಯ್ಯ ನಾಯಕ, ಮಾಜಿ ಶಾಸಕರಾದ ಡಿ.ಎಸ್‍ ಹೂಲಗೇರಿ, ರಾಜಾ ರಾಯಪ್ಪ ನಾಯಕ, ಶರಣಪ್ಪ ಮಟ್ಟೂರು ಸಾತ್‍ ನೀಡಿದ್ದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್‍ ಕುರೇರ, ಜಿಲ್ಲಾ ಆರೋಗ್ಯಾಧಿಕಾರಿ ಸುರೇಂದ್ರಬಾಬು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾಕಾಪುರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ. ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್‍, ತಹಶೀಲ್ದಾರ್ ಡಿ.ಎಸ್‍ ಜಮಾದಾರ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT