ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ | ಶಾಂತಿಯುತ ಮತದಾನಕ್ಕೆ ಆಡಳಿತ ಯಂತ್ರ ಸಜ್ಜು

ಮಸ್ಕಿ: 2,15,490 ಮತದಾರರು, 231 ಮತಗಟ್ಟೆಗಳಲ್ಲಿ ಮತದಾನ
Published 23 ಏಪ್ರಿಲ್ 2024, 13:19 IST
Last Updated 23 ಏಪ್ರಿಲ್ 2024, 13:19 IST
ಅಕ್ಷರ ಗಾತ್ರ

ಮಸ್ಕಿ: ಮೇ 7ರಂದು ನಡೆಯುವ ಎರಡನೇ ಹಂತದ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,15,490 ಮತದಾರರಿದ್ದಾರೆ. ಅದರಲ್ಲಿ ಪುರುಷ ಮತದಾರರು 1,05,375, ಮಹಿಳಾ ಮತದಾರರು 1,10,107 ಮತದಾರರಿದ್ದಾರೆ. ಇತರೆ 8, ಯುವ ಮತದಾರರು 5,012, ಹಿರಿಯ ನಾಗರಿಕ ಮತದಾರರು 1773 ಹಾಗೂ ಪಿಡಬ್ಲ್ಯೂಡಿ ಮತದಾರರು 3001 ಇದ್ದಾರೆ.

ಹಿರಿಯ ನಾಗರಿಕ ಮತದಾರರ ಮನೆ ಮನೆಗೆ ಹೋಗಿ ಮತ ಹಾಕಿಸಿಕೊಂಡು ಬರಲು ಬಿಎಲ್‌ಒಗಳನ್ನು ನೇಮಕ ಮಾಡಲಾಗಿದೆ.

ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಜೊತೆಗೆ ಅರೆ ಸೇನಾ ಪಡೆಯನ್ನು ಸಹ ಬಳಸಿಕೊಳ್ಳಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಗೆ 231 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಆ ಮತಗಟ್ಟೆಗೆ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಖಿ ಮತಗಟ್ಟೆ, ಅಂಗವಿಕಲರು ಮತಗಟ್ಟೆಗೆ ತೆರಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಜಗದೀಶ ಗಂಗಣ್ಣನವರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT