ಬುಧವಾರ, ಅಕ್ಟೋಬರ್ 20, 2021
29 °C

ರಾಯಚೂರು: ಮಗುಚಿದ ಅದಿರು ಲಾರಿ, ಚಾಲಕ ಸ್ಥಳದಲ್ಲೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತಾಲ್ಲೂಕಿನ ಗಡಿ ಗ್ರಾಮ ದೇವಸುಗೂರು ಬಳಿ ಕಬ್ಬಿಣ ಅದಿರು‌ ಲಾರಿ ಮಗುಚಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಾಯಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಹೈದರಾಬಾದ್ ನಿವಾಸಿ ನೌಶಾದ್ (35) ಮೃತ ಚಾಲಕ, ಗಾಯಗೊಂಡಿರುವ ಇಮ್ತಿಯಾಜ್ ನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೇಗವಾಗಿ ಸಂಚರಿಸುತ್ತಿದ್ದ ಲಾರಿಯ ಮುಂಭಾಗದ ಚಕ್ರವು ಸ್ಫೋಟವಾಗಿದ್ದು ಅಪಘಾತಕ್ಕೆ ಕಾರಣ. ಗಡಿಯಲ್ಲಿದ್ದ ಚೆಕ್ ಪೋಸ್ಟ್ ಕೋಣೆಗೆ ಲಾರಿ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಅದರಲ್ಲಿ ತಪಾಸಣೆ ಸಿಬ್ಬಂದಿ ಇರಲಿಲ್ಲ. ಕಟ್ಟಡ ಹಾಗೂ ಲಾರಿ ಛಿದ್ರವಾಗಿವೆ.

ಹೊಸಪೇಟೆಯಿಂದ ಹೈದರಾಬಾದ್‌ಗೆ ಲಾರಿ ಅದಿರು ಸಾಗಿಸುತ್ತಿರುವಾಗ ಅಪಘಾತವಾಗಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ... 2020ರಲ್ಲಿ ರಸ್ತೆ ಅಪಘಾತಗಳಲ್ಲಿ 1.20 ಲಕ್ಷ ಮಂದಿ ಸಾವು: ಎನ್‌ಸಿಆರ್‌ಬಿ ವರದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು