ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂತ್ರಾಲಯ: ಸಪ್ತ ರಾತ್ರೋತ್ಸವ ಸಂಪನ್ನ

Published 24 ಆಗಸ್ಟ್ 2024, 14:24 IST
Last Updated 24 ಆಗಸ್ಟ್ 2024, 14:24 IST
ಅಕ್ಷರ ಗಾತ್ರ

ರಾಯಚೂರು: ಶ್ರೀ ರಾಘವೇಂದ್ರ ತೀರ್ಥರ 352ನೇ ಆರಾಧನಾ ಮಹೋತ್ಸವ ಪ್ರಯುಕ್ತ ಮಂತ್ರಾಲಯದಲ್ಲಿ ಆಯೋಜಿಸಿದ್ದ ಸಪ್ತ ರಾತ್ರೋತ್ಸವ ಶನಿವಾರ ಸಂಪನ್ನಗೊಂಡಿತು.

ಶ್ರೀಮಠದ ಸಂಪ್ರದಾಯದಂತೆ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರ ಮೃತ್ತಿಕಾ ಬೃಂದಾವನಕ್ಕೆ ಮಂಗಳಾರತಿ ಮಾಡಿದರು. ಆರಾಧನಾ ಮಹೋತ್ಸವದ ಪ್ರಯುಕ್ತ ಕೊನೆಯ ದಿನದ ಪೂಜಾ ಕೈಂಕರ್ಯಗಳನ್ನು ಕೈಗೊಂಡರು.

ತುಂಗಭದ್ರಾ ಶಾಖಾ ಮಠದಲ್ಲಿ ಶ್ರೀರಾಯರ ಮಹಾ ರಥೋತ್ಸವಕ್ಕೆ ವಸಂತೋತ್ಸವ ಹಾಗೂ ಮಂಗಳಾರತಿ ಮಾಡುವ ಮೂಲಕ ಚಾಲನೆ ನೀಡಿದರು.

ಇಂದು ಸಾಮೂಹಿಕ ನೃತ್ಯ ಪ್ರದರ್ಶನ:

ಮಂತ್ರಾಲಯದಲ್ಲಿ ಅಂತರರಾಷ್ಟ್ರೀಯ ದಾಖಲೆಗಾಗಿ ಏಕಕಾಲದಲ್ಲಿ 350 ನೃತ್ಯ ಕಲಾವಿದರು ಆಗಸ್ಟ್ 25ರಂದು ಭಾನುವಾರ ರಾಯರ ಮಠದ ಕಾರಿಡಾರ್‌ನಲ್ಲಿ ಶ್ರೀನಾಮ ರಾಮಾಯಣ೦ ನೃತ್ಯ ಪ್ರದರ್ಶಿಸಲಿದ್ದಾರೆ.


ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ಚೆನ್ನರಾಯಪಟ್ಟಣ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಆಶ್ರಯದಲ್ಲಿ ವಿಶ್ವದ ವಿವಿಧೆಡೆಯಿಂದ ಬಂದಿರುವ ನೃತ್ಯ ಗುರುಗಳು ಮತ್ತು ನೃತ್ಯ ಕಲಾವಿದರು ಒಂದೇ ವೇದಿಕೆಯಲ್ಲಿ 15 ನಿಮಿಷಗಳ ಕಾಲ ಶ್ರೀ ನಾಮ ರಾಮಾಯಣ೦ ಗೀತಗೆ ನೃತ್ಯ ಪ್ರದರ್ಶಿಸಲಿದ್ದಾರೆ.

ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಅಕಾಡೆಮಿ ಮತ್ತು ಮಕ್ಕಳು ಹಾಗೂ ಮಠದ ಹೆಸರನ್ನು ಸೇರಿಸುವ ಹಿನ್ನೆಲೆಯಲ್ಲಿ ಜಪಾನ್, ಜರ್ಮನಿ ಇಂಡೋನೇಷಿಯಾದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಸುಬುಧೇ೦ದ್ರ ತೀರ್ಥರು ಉದ್ಘಾಟನೆ ಮಾಡಲಿದ್ದಾರೆ ಎಂದು ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಸ್ವಾತಿ ಪಿ.ಭಾರದ್ವಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT